ಖ್ಯಾತ ಸಂಗೀತ ಸಂಯೋಜಕ ಎ.ಆರ್. ರಹಮಾನ್ ಅವರಿಗೆ ಮಾತೃ ವಿಯೋಗ…

146
firstsuddi

ಚೆನ್ನೈ : ಖ್ಯಾತ ಸಂಗೀತ ಸಂಯೋಜಕ ಹಾಗೂ ಗಾಯಕ ಎ.ಆರ್. ರಹಮಾನ್ ಅವರ ತಾಯಿ ಕರೀಮಾ ಬೇಗಂ ಅವರು ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ತಾಯಿ ನಿಧನದ ಸುದ್ದಿಯನ್ನು ಎ.ಆರ್.ರಹಮಾನ್ ಅವರು ತಮ್ಮ ಟ್ವಿಟರ್ ಹಾಗೂ ಇನ್‍ಸ್ಟಾಗ್ರಾಂ ಖಾತೆಯಲ್ಲಿ ತಾಯಿಯ ಭಾವಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ಖಚಿತ ಪಡಿಸಿದ್ದು, ಕರೀಮಾ ಬೇಗಂ ಅವರ ನಿಧನಕ್ಕೆ ಅಭಿಮಾನಿಗಳು ಕೂಡಾ ಸಾಂತ್ವನ ಸೂಚಿಸಿದ್ದಾರೆ.