ಖ್ಯಾತ ಸಿನಿಮಾ ಸಾಹಿತಿ ಕವಿರಾಜ್ ಅವರ ತಂದೆ ನಿಧನ…

235
firstsuddi

ಶಿವಮೊಗ್ಗ : ಸಿನಿಮಾ ಸಾಹಿತಿ ಕವಿರಾಜ್ ಅವರ ತಂದೆ ಹರಿಯಪ್ಪ ನಾಯ್ಕ್(65) ಅವರು ಇಂದು ನಿಧನರಾಗಿದ್ದು, ಸಮಾಜವಾದಿ ಹೋರಾಟಗಾರರಾಗಿದ್ದ ಹರಿಯಪ್ಪ ಅವರು ಕಳೆದ ಹಲವು ತಿಂಗಳಿನಿಂದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದರು. ಆದರೆ ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಹರಿಯಪ್ಪ ಅವರು ತಮ್ಮ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಇಂದು ಮಧ್ಯಾಹ್ನ ಶಿವಮೊಗ್ಗದ ಮಂಡಗದ್ದೆ ಬಳಿಯ ಇರುವತ್ತಿ ಗ್ರಾಮದಲ್ಲಿ ನೆರೆವೇರಲಿದೆ ಎಂದು ತಿಳಿದು ಬಂದಿದೆ.