ಗಂಡು ಮಗುವಿಗೆ ಜನ್ಮ ನೀಡಿದ ನಟಿ ಮಯೂರಿ..!

158
Firstsuddi

ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಮಯೂರಿ ಅವರು ನಿನ್ನೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತೋಷದ ಕ್ಷಣಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಕಳೆದ ವರ್ಷ ಜೂನ್ 12 ರಂದು ತಮ್ಮ ಬಹುಕಾಲದ ಗೆಳೆಯ ಅರುಣ್ ಅವರ ಜೊತೆಗೆ ಮಯೂರಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಂತರ ತಾಯಿ ಆಗುತ್ತಿರುವ ವಿಚಾರ, ಸಿಮಂತ ಫೋಟೋಗಳು ಹಾಗೂ ಬೇಬಿ ಬಂಪ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಮಯೂರಿ ಅವರು ಹಂಚಿಕೊಂಡಿದ್ದರು.

ಮಗನ ಕೈ ಹಿಡಿದಿರುವ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿರುವ ಮಯೂರಿ ಅವರು ನಿನ್ನೆ ನನಗೆ ಗಂಡು ಮಗುವಾಗಿದೆ. ಮದುವೆ ನಂತರ ಮತ್ತೊಂದು ಬ್ಯೂಟಿಫುಲ್ ಜರ್ನಿ ಶುರು ಮಾಡುತ್ತಿದ್ದೇನೆ. ಈ ಸುಂದರ ಭಾವನೆಯನ್ನು ವ್ಯಕ್ತಪಡಿಸಲು ಪದಗಳೆ ಸಿಗುತ್ತಿಲ್ಲ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ನಮ್ಮ ಮಗುವಿನ ಮೇಲೆ ಸದಾ ಇರಲಿ ಎಂದು ಬರೆದುಕೊಂಡಿದ್ದಾರೆ.

ಅಭಿಮಾನಿಗಳು ಮಯೂರಿಯ ಮುದ್ದು ಮಗನಿಗೆ ಆಶೀರ್ವಾದ ಜೊತೆಯೆಲ್ಲಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಗಂಡು ಮಗುವಿನ ತಾಯಿ ಆಗಿರುವ ಮಯೂರಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.