ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಚಾಲಕ ನಿನ್ನೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಇಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ಹಿನ್ನಲೆ ಟ್ಯಾಕ್ಸಿ ಚಾಲಕರು ಏರ್ ಪೋರ್ಟ್ ನಲ್ಲಿ ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸಿದ್ದು, ಪ್ರಯಾಣಿಕರು ಟ್ಯಾಕ್ಸಿ ಸೇವೆ ಇಲ್ಲದೇ ಪರದಾಡುವಂತಾಗಿದೆ.
ಟ್ಯಾಕ್ಸಿ ಚಾಲಕ ಪ್ರತಾಪ್ ಅವರ ಆತ್ಮಹತ್ಯೆಯಿಂದ ಅಕ್ರೋಶಗೊಂಡಿರುವ ಟ್ಯಾಕ್ಸಿ ಚಾಲಕರು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಟ್ಯಾಕ್ಸಿಗಳನ್ನು ಓಡಿಸುವುದಿಲ್ಲ ಎಂದು ನಿನ್ನೆ ಸಂಜೆಯಿಂದಲೇ ಏರ್ ಪೋರ್ಟ್ ನಲ್ಲಿ ಪ್ರತಿಭಟನೆ ಮಾಡುತ್ತಿದ್ದು, ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಿದ್ದಾರೆ. ಇದರಿಂದ ವಿದೇಶದಿಂದ ಬರುವ ಪ್ರಯಾಣಿಕರು ಟ್ಯಾಕ್ಸಿ ಇಲ್ಲದೇ ಪರದಾಡುವಂತಾಗಿದೆ. ಸದ್ಯ ಏರ್ ಪೋರ್ಟ್ನಿಂದಲೇ ಬಸ್ ಗಳ ಸೇವೆ ಮಾಡಲಾಗಿದ್ದು, ಪ್ರಯಾಣಿಕರು ಬಸ್ ಗಳಲ್ಲಿಯೇ ತೆರಳುವಂತಾಗಿದೆ.










