ಚಾಲಕನ ನಿಯಂತ್ರಣ ತಪ್ಪಿ ಫುಟ್‍ಬಾತ್‍ನಲ್ಲಿ ನಿಂತವರ ಮೇಲೆ ಹರಿದ ಲಾರಿ-ಮೂವರ ದುರ್ಮರಣ…

264
firstsuddi

ಬಾಗಲಕೋಟೆ : ಚಾಲಕನ ನಿಯಂತ್ರಣ ತಪ್ಪಿ ಲಾರಿ ರಸ್ತೆ ಬದಿಯಲ್ಲಿ ನಿಂತವರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕೆರೂರು ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮಾನಂದಪ್ಪ ಕರಿ(17). ಪೂಜಾ(22) ಹಾಗೂ ಲಕ್ಷ್ಮಣ ಹಾದಿಮನಿ(32) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದ್ದು, ಮೃತರು ರಸ್ತೆ ಬದಿಯ ಫುಟ್‍ಬಾತ್‍ನಲ್ಲಿ ನಿಂತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಏಕಾಏಕಿ ಫುಟ್‍ಪಾತ್ ಮೇಲೆ ಹರಿದ ಪರಿಣಾಮ ಮೂವರು ಲಾರಿಯ ಕೆಳಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆಯಲ್ಲಿ ಇನ್ನೂ ಮೂವರು ಗಂಭೀರ ಗಾಯಗೊಂಡಿದ್ದಾರೆ. ಈ ಕುರಿತು ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.