ಚಿಕ್ಕಮಗಳೂರು : ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ…

193
firstsuddi

ಚಿಕ್ಕಮಗಳೂರು : ಕಳೆದ ಎರಡು ದಿನಗಳಿಂದ ಮನೆ ಹಿಂಬದಿಯಲ್ಲಿ ಅವಿತುಕೊಂಡಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಶೃಂಗೇರಿ ಪಟ್ಟಣದ ರಾಜನ್ ನಗರದಲ್ಲಿ ನಡೆದಿದೆ. ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪ ಪಟ್ಟಣದ ರಾಜನ್ ನಗರದ ಮನೆಯೊಂದರ ಬಳಿ ಕಳೆದ ಎರಡು ದಿನಗಳಿಂದ ಅವಿತುಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಬಳಿಕ ಸ್ಥಳಿಯರು ಉರಗ ಪ್ರೇಮಿ ಸ್ನೇಕ್ ಅರ್ಜುನ್ ಅವರಿಗೆ ಈ ವಿಚಾರವನ್ನು ತಿಳಿಸಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಸ್ನೇಕ್ ಅರ್ಜುನ್ ಅವರು ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಕೆರೆಕಟ್ಟೆ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.