ಚಿಕ್ಕಮಗಳೂರು : ಇತಿಹಾಸ ಪ್ರಸಿದ್ಧ ಶಕುನ ರಂಗನಾಥ ಸ್ವಾಮಿ ದೇವಾಲಯದ ಹುಂಡಿಯನ್ನು ಕದ್ದೊಯ್ದ ಕಳ್ಳರು…

460

ಚಿಕ್ಕಮಗಳೂರು : ಕಳ್ಳರು ದೇವಾಲಯದ ಹುಂಡಿಯನ್ನು ಕಳ್ಳತನ ಮಾಡಿರುವ ಘಟನೆ ಕಡೂರು ತಾಲ್ಲೂಕಿನ ಸಖರಾಯಪಟ್ಟಣದ ಇತಿಹಾಸ ಪ್ರಸಿದ್ಧ ಶಕುನ ರಂಗನಾಥ ಸ್ವಾಮಿ ದೇವಾಲಯದಲ್ಲಿ ನಡೆದಿದೆ. ಈ ದೇವಾಲಯದಲ್ಲಿ 4ನೇ ಬಾರಿ ಹುಂಡಿ ಕಳ್ಳತನವಾಗಿದ್ದು, 4ಲಕ್ಷಕ್ಕೂ ಹೆಚ್ಚು ಹಣವಿದ್ದ 4 ಹುಂಡಿಯನ್ನು 8ಕ್ಕೂ ಹೆಚ್ಚು ಮಂದಿ ಕಳ್ಳರಿಂದ ಕಳ್ಳತನವಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಸಖರಾಯಪಟ್ಟಣ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದು, ಬೆರಳಚ್ಚು ತಜ್ಞರು ಹಾಗೂ ಡಾಗ್ ಸ್ಕ್ವಾಡ್ ತಂಡದಿಂದ ತನಿಖೆ ನಡೆಸಲಾಗಿದ್ದು, ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.