ಚಿಕ್ಕಮಗಳೂರು : ಜಮೀನಿನ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ-ಪಿಡಿಓ ಕಾರಿಗೆ ಬೆಂಕಿ…

195
firstsuddi

ಚಿಕ್ಕಮಗಳೂರು : ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ಸಂಭವಿಸಿ ಪಿಡಿಓ ವಾಹನಕ್ಕೆ ಬೆಂಕಿ ಹಾಕಿರುವ ಘಟನೆ ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಬಾಸಾಪುರ ಗ್ರಾಮದಲ್ಲಿ ನಡೆದಿದೆ. ಬಗರ್ ಹುಕುಂ ಸರ್ಕಾರಿ ಜಮೀನಿಗಾಗಿ 2 ಕುಟುಂಬಗಳ ನಡುವೆ ಕಲಹ ಉಂಟಾಗಿದ್ದು, ಜಮೀನಿನಲ್ಲಿಯೇ ಎರಡು ಕುಟುಂಬಗಳು ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಹಲವು ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಭದ್ರಾವತಿ ತಾಲ್ಲೂಕಿನ ಪಿಡಿಓ ಹನುಮಂತಪ್ಪ ಎಂಬುವವರನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಈ ಕುರಿತು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.