ಚಿಕ್ಕಮಗಳೂರು : ಡಿ.ಕೆ.ಶಿವಕುಮಾರ್ ಅವರಿಗೆ ಪಕ್ಷದ ಶಾಸಕನಿಗಿಂತ ಸಮಾಜಘಾತುಕ ಶಕ್ತಿಗಳೇ ದೊಡ್ಡವಾದ್ವ : ಸಚಿವ ಸಿ.ಟಿ.ರವಿ.

177
firstsuddi

ಎನ್.ಆರ್. ಪುರ : ಡಿ.ಕೆ.ಶಿವಕುಮಾರ್ ಅವರಿಗೆ ತಮ್ಮ ಪಕ್ಷದ ಶಾಸಕನ ಮನೆ ಧ್ವಂಸವಾಗಿರುವುದಕ್ಕಿಂತ ಸಮಾಜಘಾತುಕ ಶಕ್ತಿಗಳೇ ದೊಡ್ಡವಾದ್ವ ಎಂದು ಸಚಿವ ಸಿ.ಟಿ.ರವಿ ಅವರು ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಕಿಡಿ ಕಾರಿದ್ದಾರೆ. ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಆವರಣದಲ್ಲಿ ಜಗದ್ಗುರು ರೇಣುಕಾಚಾರ್ಯರ 51 ಅಡಿ ಪ್ರತಿಮೆಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೊಲೀಸರು ಕಾರ್ಪೋರೇಟರ್ಗಳಿಗೆ ನೋಟಿಸ್ ಕೊಟ್ಟಿರುವುದಕ್ಕೆ ಸರ್ಕಾರದ ವಿರುದ್ಧ ಡಿಕೆಶಿ ಅಸಮಾಧಾನ ಹೊರಹಾಕಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ ಅವರು, ಡಿ.ಕೆ.ಶಿವಕುಮಾರ್ ಅವರು ಆರೋಪ ಮಾಡುವುದು ಅವರನ್ನು ಬೆಂಬಲಿಸುವ ಮಾತುಗಳನ್ನಾಡಿದ್ದಾರೆ. ಸುಖಾಸುಮ್ಮನೆ ಮಾಡಲು ಇಲ್ಲಿ ಯಾರೂ ಕೆಲಸ ಇಲ್ಲದೆ ಇರೋರಿಲ್ಲ. 300ಕ್ಕೂ ಹೆಚ್ಚು ವಾಹನ ಸುಟ್ಟಿದ್ದಾರೆ. ಪೊಲೀಸ್ ಸ್ಟೇಷನ್ ಭಸ್ಮ ಆಗಿದೆ. ಅವರದ್ದೇ ಪಕ್ಷದ ಶಾಸಕನ ಮನೆಯೂ ಭಸ್ಮ ಆಗಿದೆ. ಅವರು ಬೇರೆ ಪಕ್ಷ ಇರಬಹುದು, ಆದರೆ, ಅವರ ರಾಜಕಾರಣದ ದಾರಿ ಬಗ್ಗೆ ಅನುಮಾನದ ಮಾತುಗಳನ್ನಾಡಿದ್ದಾರೆ. ಅವರು ಆಲೋಚಿಸುವ ರೀತಿ ನೋಡಿದರೆ, ತಮ್ಮ ಪಕ್ಷದ ಶಾಸಕನಿಗಿಂತ ಸಮಾಜಘಾತುಕ ಶಕ್ತಿಗಳೇ ಇವರಿಗೆ ದೊಡ್ಡವಾದ್ವ ಎಂದು ಡಿಕೆಶಿ ಅವರ ವಿರುದ್ಧ ಕಿಡಿಕಾರಿದ್ದಾರೆ. ಸಂಪನ್ನರು ಭಯ ಬೀಳಬೇಕಿಲ್ಲ. ಕಳ್ಳರನ್ನು ಬಿಡುವುದಿಲ್ಲ ಎಂದಿದ್ದಾರೆ. 300ಕ್ಕೂ ಹೆಚ್ಚು ಜನರನ್ನು ಬಂಧಿಸಿದೆ. ನಮ್ಮ ಪಕ್ಷ ಸಮಾಜಘಾತುಕ ಶಕ್ತಿಗಳ ಜೊತೆ ರಾಜಿ ಮಾಡಿಕೊಂಡು ಆಡಳಿತ ಮಾಡೋ ಪಕ್ಷವಲ್ಲ. ಯಾವುದೇ ಸಮಾಜಘಾತುಕ ಶಕ್ತಿಗಳ ಜೊತೆ ನಾವು ರಾಜಿನು ಮಾಡಿಕೊಳ್ಳುವುದಿಲ್ಲ. ಅವರ ಜೊತೆ ಲಾಭ ಮಾಡಿಕೊಳ್ಳುವ ರಾಜಕಾರಣವನ್ನೂ ನಾವು ಮಾಡಲ್ಲ ಎಂದಿದ್ದಾರೆ. 300ಕ್ಕೂ ಹೆಚ್ಚು ಜನರನ್ನು ಬಂದಿಸಿದ್ದೇವೆ. ಅದಕ್ಕೆ ಬೇಕಾಗ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದೇವೆ. ವಾಟ್ಸಾಪ್-ಫೇಸ್ಬುಕ್ನಲ್ಲಿ ಯಾರ್ಯಾರು ಕರೆ ಕೊಟ್ಟರು, ಎಲ್ಲೆಲ್ಲಿ ಮಾರಕಾಯುಧಗಳನ್ನು ಸಂಗ್ರಹಿಸಿಟ್ಟರು. ಪೆಟ್ರೋಲ್ ಸಂಗ್ರಹ ಎಲ್ಲಿ, ಹಣದ ಮೂಲ ಎಲ್ಲಿ ಎಲ್ಲದರ ಮಾಹಿತಿ ಸಂಗ್ರಹವಾಗುತ್ತಿದೆ. ಎಲ್ಲವನ್ನು ಜನರ ಮುಂದೆ ಇಡುತ್ತೀವಿ, ಯಾವುದೇ ರಾಜಿ ಪ್ರಶ್ನೆ ಇಲ್ಲ. ರಾಜಿ ಆಗಲು ಪಕ್ಷದ ಒಳಗೂ ಬಿಡಲ್ಲ. ಹೊರಗೂ ಬಿಡಲ್ಲ ಎಂದಿದ್ದಾರೆ.