ಚಿಕ್ಕಮಗಳೂರು : ನಾನು ಪೋಸ್ಟರ್-ಫ್ಲಾಗ್ ಕಟ್ಟಿ, ಆಟೋದಲ್ಲಿ ಅನೌನ್ಸ್ ಮಾಡಿ ಬೆಳೆದವನು : ಸಚಿವ ಸಿ.ಟಿ.ರವಿ.

329

ಚಿಕ್ಕಮಗಳೂರು : ಸಂಪುಟ ವಿಸ್ತರಣೆ ಹಿನ್ನೆಲೆ, ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಿ.ಟಿ.ರವಿ ಅವರು ಸಚಿವ ಸಂಪುಟ ವಿಸ್ತರಣೆ ಯಾವಾಗ, ಯಾರಿಗೆ ಬೇಕಾದರು ಆಗಬಹದು, ಅದು ಮುಖ್ಯಮಂತ್ರಿ ಅವರ ವಿವೇಚನೆಗೆ ಬಿಟ್ಟದ್ದು. ಪಕ್ಷದ ವರಿಷ್ಟರು ಸಲಹೆ ಕೊಡುತ್ತಾರೆ ಮುಖ್ಯಮಂತ್ರಿ ಅವರು ನಿರ್ಧಾರ ಮಾಡುತ್ತಾರೆ ಎಂದಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ ಕೆಲ ಸಚಿವರಿಗೆ ಕೋಕ್ ಕೊಡುತ್ತಾರೆ, ಅದರಲ್ಲಿ ನಿಮ್ಮ ಹೆಸರು ಇದೆ ಎಂಬ ಪ್ರಶ್ನೆಗೆ ಸಿ.ಟಿ.ರವಿ ಅವರು ಮಾರ್ಮಿಕವಾಗಿ ಉತ್ತರಿಸಿದ್ದು, ನಾನು ಪೋಸ್ಟರ್-ಫ್ಲಾಗ್ ಕಟ್ಟಿ, ಆಟೋದಲ್ಲಿ ಅನೌನ್ಸ್ ಮಾಡಿ ಬೆಳೆದವನು. ನಾನು ಬದುಕಿರುವವರೆಗೂ ನನ್ನ ಕಾರ್ಯಕರ್ತ ಸ್ಥಾನವನ್ನು ಯಾರೂ ಕಿತ್ತುಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ಸಚಿವ ಸ್ಥಾನ ಹೋದರೆ ಕಾರ್ಯಕರ್ತನಾಗಿ ಇರುತ್ತೇನೆ ಎಂದು ಒಗಟಿನ ರೀತಿಯಲ್ಲಿ ಉತ್ತರಿಸಿದ ಇವರು, ಕೆಲಸ ಮಾಡುವುದಕ್ಕೆ ಯಾವ ಪೋಸ್ಟ್ ಆದರೇನು, ಮಂತ್ರಿಯ ವ್ಯಾಪ್ತಿ ಹಾಗೂ ಸಾಮರ್ಥ್ಯ ನನಗೆ ಗೊತ್ತು ಎಂದು, ಎಂ.ಪಿ. ಪ್ರಕಾಶ್ ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಾಗಬಹುದು, ಪ್ರವಾಸೋಧ್ಯಮ ಇಲಾಖೆಯಾಗಬಹುದು ಎಷ್ಟು ಕೆಲಸವಾಗಿದೆ ಎಂದು ಮೌಲ್ಯಮಾಪನ ಮಾಡಿ ನೀವೇ ಜಡ್ಜ್ ಎಂದಿದ್ದಾರೆ. ಪ್ರಬಲ ಖಾತೆ ಸಿಗುತ್ತಾ ಎಂದು ಕೇಳಿದ್ದಕ್ಕೆ, ವ್ಯಕ್ತಿ ದುರ್ಬಲನಾದರೆ ಎಲ್ಲಾ ಖಾತೆಯೂ ದರ್ಬಲವೇ, ವ್ಯಕ್ತಿ ಪ್ರಬಲನಾಗಿದ್ದರೆ ಯಾವ ಖಾತೆಗಾದರು ಪ್ರಾಬಲ್ಯ ತರಬಹುದು ಎಂದಿದ್ದಾರೆ.