ಚಿಕ್ಕಮಗಳೂರು : ಪೌರತ್ವ ಕಿಚ್ಚು ಹಿನ್ನೆಲೆ, ಕೊಟ್ಟಿಗೆಹಾರದಲ್ಲಿ ವಾಹನಗಳ ಮೇಲೆ ತೀವ್ರ ನಿಗಾ ಇಟ್ಟ ಖಾಕಿ ಪಡೆ…

343
firstsuddi

ಚಿಕ್ಕಮಗಳೂರು : ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ಕಿಚ್ಚು ಹಿನ್ನೆಲೆ, ಚಿಕ್ಕಮಗಳೂರು-ಮಂಗಳೂರು ಗಡಿ ಭಾಗವಾದ ಕೊಟ್ಟಿಗೆಹಾರ ಚೆಕ್‍ಪೋಸ್ಟ್ ಬಳಿ ಪೊಲೀಸರು ತೀವ್ರ ನಿಗಾ ಇಟ್ಟಿದ್ದು, ಮಂಗಳೂರು ಕಡೆಯಿಂದ ಚಿಕ್ಕಮಗಳೂರಿಗೆ ಆಗಮಿಸುವ ಹಾಗೂ ಚಿಕ್ಕಮಗಳೂರು ಕಡೆಯಿಂದ ಮಂಗಳೂರಿಗೆ ತೆರಳುವ ವಾಹನಗಳನ್ನು ಡಿವೈಎಸ್ಪಿ ಬಿ.ಎಸ್ ಅಂಗಡಿ ಹಾಗೂ ವೃತ್ತ ನಿರೀಕ್ಷಕ ಜಗನ್ನಾಥ್ ನೇತೃತ್ವದಲ್ಲಿ ತಪಾಸಣೆ ನಡೆಸುತ್ತಿದ್ದು, ವಾಹನಗಳ ಬಗ್ಗೆ ತೀವ್ರ ನಿಗಾ ಇಡಲಾಗಿದೆ.