ಚಿಕ್ಕಮಗಳೂರು : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರು ಸಹಕಾರ ಸಂಘದಲ್ಲೇ ವ್ಯವಹರಿಸುವ ಮೂಲಕ ಸಂಘದ ಅಭಿವೃದ್ದಿಗೆ ಸಹಕರಿಸಬೇಕು ಎಂದು ಶ್ರೀಮತಿ ಗೌರಮ್ಮ ಬಸವೇಗೌಡ ಹೇಳಿದರು.
ತಾಲ್ಲೂಕಿನ ಕೈಮರದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ರೈತರ ಜೀವನಾಡಿಯಾದ ಸಂಘಕ್ಕೆ ಉತ್ತಮ ಕಟ್ಟಡ ನಿರ್ಮಿಸಿರುವುದಕ್ಕೆ ಅಧ್ಯಕ್ಷರು, ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸಿದರು.
ಕಾಫಿ ಮಂಡಳಿ ರಾಷ್ಟ್ರೀಯ ಅಧ್ಯಕ್ಷ ಎಂ.ಎಸ್.ಬೋಜೇಗೌಡ ಮಾತನಾಡಿ ಸಹಕಾರ ಸಂಘಗಳು ರಾಜಕೀಯ ರಹಿತವಾಗಿರಬೇಕು ಸದಸ್ಯರು ಸಹಾ ಯೋಗ್ಯ ವ್ಯಕ್ತಿಗಳನ್ನು ಚುನಾಯಿಸಬೇಕು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷರು ಹಾಗೂ ಸ್ಥಳದ ದಾನಿಗಳಾದ ಹೆಚ್.ಟಿ.ಚಂದ್ರೇಗೌಡ ಮಾತನಾಡಿ ಸಂಘವು ಸದಸ್ಯರು, ಸರ್ಕಾರ, ಸಾರ್ವಜನಿಕರ ದೇಣಿಗೆ ಹಣದಿಂದ ಸುಸಜ್ಜಿತವಾದ ಕಟ್ಟಡ ನಿರ್ಮಿಸಿದ್ದು ರೈತ ಸದಸ್ಯರಿಗೆ ರೂ.3 ಕೋಟಿ ಸಾಲ ವಿತರಿಸಿದ್ದು, 147 ಸದಸ್ಯರಿಗೆ 1.8 ಕೋಟಿ ಸಾಲಮನ್ನಾ ದೊರೆತಿದೆ ಎಂದರು.
ಸಹಕಾರಿ ರತ್ನ ಪುರಸ್ಕೃತ ಬಿ.ಸಿ.ಲೋಕಪ್ಪಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಇ.ಮಂಜುನಾಥ್, ಜಿ.ಪಂ. ಸದಸ್ಯೆ ಶ್ರೀಮತಿ ಜಸಿಂತ ಅನಿಲ್‍ಕುಮಾರ್, ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ. ರಾಜೇಗೌಡ, ಸಂಘದ ಸ್ಥಾಪಕ ಅಧ್ಯಕ್ಷ ಮನುಕುಮಾರ್, ಅಲ್ಲಂಪುರ ಗ್ರಾ.ಪಂ. ಸದಸ್ಯ ಡಿ.ರವಿ, ಎಪಿಎಂಸಿ ಸದಸ್ಯ ಟಿ.ಎಸ್.ಶಿವೇಗೌಡ, ಮಾಜಿ ಅಧ್ಯಕ್ಷ ಹೆಚ್.ಎಸ್.ಈಶ್ವರೇಗೌಡ, ಮಾತನಾಡಿ ದರು.
ಸಮಾರಂಭದಲ್ಲಿ ನಿವೇಶನ ದಾನಿಗಳಾದ ಶ್ರೀಮತಿ ಕೆ.ಆರ್.ರೇಣುಕ ಮತ್ತು ಹೆಚ್.ಟಿ. ಚಂದ್ರೇಗೌಡ ಅವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಟಿ.ಕೆ.ರಾಘವೇಂದ್ರ, ನಿರ್ದೇಶಕರುಗಳಾದ ಕೆ.ಎನ್.ಪದ್ಮಾಕ್ಷೇ ಗೌಡ, ಡಿ.ಎಂ.ಶಿವಕುಮಾರ್, ಪಿ.ಎನ್.ಲಕ್ಷ್ಮಣಗೌಡ, ಎ.ಟಿ.ರಮೇಶ್, ವಿ.ಸಿ.ವಿನೋದ್‍ಕುಮಾರ್, ಜೆ.ಡಿ.ಲೋಕೇಶ್, ಶ್ರೀಮತಿ ಹೆಚ್.ಪಿ.ಜಯಲಕ್ಷ್ಮೀ, ಶ್ರೀಮತಿ ಎ.ಎನ್.ಪುಷ್ಪ ನಾಗರಾಜ್, ಡಿಸಿಸಿ ಬ್ಯಾಂಕಿನ ಮೇಲ್ವಿಚಾರಕ ಡಿ.ನಾಗೇಶ್, ಸಿಬ್ಬಂದಿ ಜಗದೀಶ್ ಉಪಸ್ಥಿತರಿದ್ದರು.
ಸಂಘದ ಮಾಜಿ ಅಧ್ಯಕ್ಷ ಕೆ.ಕೆ.ಮನುಕುಮಾರ್ ನಿರೂಪಿಸಿ, ಸಂಘದ ನಿರ್ದೇಶಕ ಎಂ.ಬಿ.ಸತೀಶ್ ಸ್ವಾಗತಿಸಿ, ಸಿಇಒ ಗಿರೀಶ್ ವಂದಿಸಿದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಸಹಕಾರ ಸಂಘದ ಸದಸ್ಯರು ಸಹಕಾರ ಸಂಘದಲ್ಲೇ ವ್ಯವಹರಿಸುವ ಮೂಲಕ ಸಂಘದ ಅಭಿವೃದ್ದಿಗೆ ಸಹಕರಿಸಬೇಕು...










