ಚಿಕ್ಕಮಗಳೂರು : ಮಹಿಳೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದ ವ್ಯಕ್ತಿಗೆ ಅದೇ ಮಹಿಳೆ ರಸ್ತೆ ಮಧ್ಯೆಯಲ್ಲೇ ಧರ್ಮದೇಟು ಕೊಟ್ಟಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದಲ್ಲಿ ನಡೆದಿದೆ. ಜಯಪುರದ ಸುಂದರೇಶ್ ಎಂಬುವವರು ಅದೇ ಊರಿನ ಸೌಮ್ಯ ಎಂಬ ಮಹಿಳೆ ಮೇಲೆ ಇಲ್ಲ-ಸಲ್ಲದ ಆರೋಪ ಮಾಡುತ್ತಿದ್ದರು. ಆಕೆಯ ಶೀಲದ ಬಗ್ಗೆ ಎಲ್ಲರ ಬಳಿಯೂ ಅಪಪ್ರಚಾರ ಮಾಡುತ್ತಿದ್ದು, ಆಕೆ ಸರಿ ಇಲ್ಲ ಎಂದು ಹೇಳುತ್ತಿದ್ದರು. ಅಷ್ಟೆ ಅಲ್ಲದೇ ಗ್ರಾಮಸ್ಥರ ಮನೆ ಬಾಗಿಲಿಗೆ ಕರಪತ್ರ ಮಾಡಿಸಿ ಅಂಟಿಸಿದ್ದರು. ಈ ಬಗ್ಗೆ ಸೌಮ್ಯ ಅವರು ಜಯಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜಯಪುರ ಪೊಲೀಸರು ಆತನನ್ನು ಬಂಧಿಸಿ ಜೈಲಿಗೂ ಹಾಕಿದ್ದರು. ಆದರೆ ಬೇಲ್ ಮೇಲೆ ಹೊರಬಂದ ಸುಂದರೇಶ್ ಅವರು ಮತ್ತೆ ಅದೇ ಕೆಲಸ ಮಾಡಿದ್ದರಿಂದ ಮಹಿಳೆ ಸುಂದರೇಶ್ ರಸ್ತೆಯಲ್ಲಿ ಸಿಕ್ಕಾಗ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ರಸ್ತೆ ಅನ್ನೋದನ್ನೂ ನೋಡದೆ ಎಡಗೈ-ಬಲಗೈ, ಚಪ್ಪಲಿಯಲ್ಲಿ ಬುದ್ದಿ ಹೇಳಿದ್ದಾರೆ. ಇವರಿಬ್ಬರೂ ಹಳೆಯ ಸ್ನೇಹಿತರು ಎನ್ನಲಾಗಿದೆ.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಮಹಿಳೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದ ವ್ಯಕ್ತಿಗೆ ಮಹಿಳೆಯಿಂದ ರಸ್ತೆ ಮಧ್ಯೆಯಲ್ಲೇ ಧರ್ಮದೇಟು…










