ಚಿಕ್ಕಮಗಳೂರು : ರೈತರ ಜಮೀನು ಬಿಡಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ…

140
firstsuddi

ಚಿಕ್ಕಮಗಳೂರು : ಅರಣ್ಯ ಇಲಾಖೆ ವಶಪಡಿಸಿಕೊಂಡಿರುವ ತಾಲ್ಲೂಕಿನ ಸಿಂದಿಗೆರೆಯ ರೈತರಿಗೆ ಮಂಜೂರಾಗಿರುವ ಜಮೀನನ್ನು ಮತ್ತೆ ಅವರಿಗೆ ಬಿಡಿಸಿಕೊಡುವಂತೆ ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರನ್ನು ರೈತರೊಂದಿಗೆ ನಿನ್ನೆ ಭೇಟಿ ಮಾಡಿದ ಸಂಘಟನೆಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.

1964ರಲ್ಲಿ ಸಿಂದಿಗೆರೆ ಸುತ್ತಮುತ್ತಲ ಬಡ ರೈತರಿಗೆ ತಲಾ 4 ಎಕರೆಯಂತೆ ಸರ್ಕಾರ ಭೂಮಿಯನ್ನು ಮಂಜೂರು ಮಾಡಿತ್ತು, ಆ ರೈತರು ಆ ಭೂಮಿಯಲ್ಲಿ ಬೆಳೆಯನ್ನು ಬೆಳೆದು ಜೀವನ ಸಾಗಿಸುತ್ತಿದ್ದರು ಎಂದರು.

2000 ಇಸವಿಯಲ್ಲಿ ಅರಣ್ಯ ಇಲಾಖೆ ಆ ಭೂಮಿಯನ್ನು ವಶಪಡಿಸಿಕೊಂಡಿದ್ದು ಇದುವರೆಗೂ ರೈತರಿಗೆ ಹಿಂತಿರುಗಿಸಿಲ್ಲ ಇದರಿಂದಾಗಿ ಆ ಭೂಮಿಯನ್ನೇ ನೆಚ್ಚಿಕೊಂಡು ಬದುಕುತಿದ್ದ ಬಡ ರೈತರು ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿ ಬೀದಿ ಪಾಲಾಗಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆಯ ರಾಜ್ಯಾಧ್ಯಕ್ಷ ಸೋಮುನಾಯಕ್, ಜಿಲ್ಲಾಧ್ಯಕ್ಷ ಪಿ.ಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ಸಿ.ಡಿ.ರಾಜನ್, ಇರ್ಫಾನ್ ಅಹಮದ್, ರೈತರಾದ ಚೆನ್ನಯ್ಯ, ನೀಲಯ್ಯ ಹಾಜರಿದ್ದರು.