ಚಿಕ್ಕಮಗಳೂರು : ಲಾಕ್‍ಡೌನ್‍ನಿಂದಾಗಿ ಆಹಾರ ಕಾಣದೆ ಕಂಗಾಲಾಗಿದ್ದ ನಗರದ ನಿರ್ಗತಿಕರಿಗೆ ಕದಂಬ ಡೆವೆಲಪರ್ಸ್ ಸಂಸ್ಥೆ ವತಿಯಿಂದ ಸಹಾಯಹಸ್ತ…

374
firstsuddi

ಚಿಕ್ಕಮಗಳೂರು : ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ವಿಧಿಸಿರುವ ಲಾಕ್‍ಡೌನ್‍ನಿಂದಾಗಿ ಆಹಾರ ಕಾಣದೆ ಕಂಗಾಲಾಗಿದ್ದ ನಗರದ ಭಿಕ್ಷುಕರು, ನಿರ್ಗತಿಕರು ಮತ್ತು ಕೂಲಿ ಕಾರ್ಮಿಕರಿಗೆ ಕದಂಬ ಡೆವೆಲಪರ್ಸ್ ಸಂಸ್ಥೆಯ ಪದಾಧಿಕಾರಿಗಳು ಇಂದು ಸಹಾಯಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆದರು.
ನಗರದ ಹೋಟೆಲ್‍ವೊಂದರಲ್ಲಿ ಬೆಳಗ್ಗೆ 20 ಕೆ.ಜಿ.ಯಷ್ಟು ಅಕ್ಕಿಯಿಂದ ಪಲಾವ್ ತಯಾರಿಸಿಕೊಂಡ ಸಂಸ್ಥೆಯ ಪದಾಧಿಕಾರಿಗಳು ನೀರಿನ ಬಾಟಲ್‍ಗಳು ಮತ್ತು ಬಾಳೆಹಣ್ಣುಗಳೊಂದಿಗೆ ಕಾರಿನಲ್ಲಿ ಮಧ್ಯಾಹ್ನದವರೆಗೆ ಸಂಚರಿಸಿ ಭಿಕ್ಷುಕರು, ನಿರ್ಗತಿಕರು ಮತ್ತು ಕೂಲಿ ಕಾರ್ಮಿಕರಿಗೆ ವಿತರಿಸಿದರು.
ಬಸ್‍ಸ್ಟ್ಯಾಂಡ್, ಆಜಾದ್ ಪಾರ್ಕ್ ವೃತ್ತ, ಬೈಪಾಸ್ ರಸ್ತೆ, ಹಿರೇಮಗಳೂರು, ಬಸವನಹಳ್ಳಿ ಮುಖ್ಯರಸ್ತೆ ಮತ್ತು ಹನುಮಂತಪ್ಪ ವೃತ್ತದ ಬಳಿ ಇದ್ದ ಭಿಕ್ಷುಕರು, ನಿರ್ಗತಿಕರು ಮತ್ತು ಕೂಲಿ ಕಾರ್ಮಿಕರ ಬಳಿ ತೆರಳಿ ಆಹಾರದ ಪೊಟ್ಟಣ, ಬಾಳೆಹಣ್ಣು ಮತ್ತು ನೀರಿನ ಬಾಟಲುಗಳನ್ನು ನೀಡಿದರು.
ಸಂಸ್ಥೆಯ ಪಾಲುದಾರ ಹೆಚ್.ಎಂ.ರತನ್, ಅಧಿಕಾರಿ ರಾಘವೇಂದ್ರ, ಶ್ರೇಯಾಂಕ್, ಕಿರಣ್, ಶ್ರೀಕಾಂತ್, ರಘು ಹಾಜರಿದ್ದರು.