ಜನ ಬಯಸಿದರೆ ಅಫಜಲಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವೆ : ಆರ್.ಡಿ ಪಾಟೀಲ್

56
firstsuddi

ಕಲಬುರಗಿ : ಪಿಎಸ್ಐ ಪರೀಕ್ಷೆ ನೇಮಕಾತಿ ಅಕ್ರಮ ಪ್ರಕರಣದ ಕಿಂಗ್ ಪಿನ್ ಆರ್.ಡಿ.ಪಾಟೀಲ್ ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಸಂದೇಶ ರವಾನಿಸಿದ್ದಾರೆ.

ನಿನ್ನೆ ಸಿಐಡಿ ಅಧಿಕಾರಿಗಳು ಆರೋಪಿ ಆರ್.ಡಿ. ಪಾಟೀಲ್ ಬಂಧಿಸಲು ಬಂದಿದ್ದರು. ಈ ವೇಳೆ ಅಧಿಕಾರಿಗಳನ್ನು ತಳ್ಳಿ ಆರ್.ಡಿ. ಪಾಟೀಲ್ ಪರಾರಿಯಾಗಿದ್ದರು. ಸದ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದಾರೆ. ಕಳೆದ 9 ತಿಂಗಳಿನಿಂದ ನನ್ನ ಮೇಲೆ ರಾಜಕೀಯ ಕುತಂತ್ರ ಮಾಡಿ, ಹಗರಣದಲ್ಲಿ ಸಿಲುಕಿಸಲಾಗಿದೆ. ನನ್ನ ಸಾಮಾಜಿಕ ಸೇವೆ ನೋಡಿ ರಾಜಕೀಯಕ್ಕೆ ಬರಬಹುದೆಂದು ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಕೆಲವು ಸಿಐಡಿ ಅಧಿಕಾರಿಗಳು ರಾಜಕೀಯ ಮುಖಂಡರ ಕೈಗೊಂಬೆಯಾಗಿದ್ದು, ನನ್ನ ಮೇಲೆ ಕುತಂತ್ರ ಹೆಣೆದಿದ್ದಾರೆ ಎಂದ ಅವರು, ಯಾರು ಏನೇ ಕುತಂತ್ರ ಮಾಡಿದರು. ನನ್ನ ಸಾಮಾಜಿಕ ಸೇವೆ ನಿಲ್ಲುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಜನ ಬಯಸಿದರೆ ಅಫಜಲಪುರ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೇ ಸ್ಪರ್ದೆ ಮಾಡ್ತೇನೆ. ನಾನು ಎಲ್ಲಿಯೂ ಓಡಿ ಹೋಗಿಲ್ಲಾ, ಇಲ್ಲೇ ಇದ್ದೇನೆ. ಇಡಿ ಅಧಿಕಾರಿಗಳು ಬಂದಾಗ ಅವರ ವಿಚಾರಣೆ ಎದುರಿಸಿದ್ದೇನೆ. ಇಡಿ ಅಧಿಕಾರಿಗಳು ಬಂದು ಹೋದ ಮೇಲೆ ನಾನು ಹೊರಗೆ ಹೋಗಿದ್ದೆ. ಆಗ ಸಿಐಡಿ ಅಧಿಕಾರಿಗಳು ಮನೆಗೆ ಬಂದಿದ್ದಾರೆ. ನಾನು ಸಿಐಡಿ ಅಧಿಕಾರಿಗಳನ್ನು ತಳ್ಳಿ ಓಡಿ ಹೋಗಿದ್ದೇನೆ ಅನ್ನೋದು ಸುಳ್ಳು. ಸಿಐಡಿ ವಿರುದ್ಧ ನಡೆದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ನಾನು ಈ ನೆಲದ ಕಾನೂನಿಗೆ ಗೌರವ ನೀಡುವ ಮನುಷ್ಯ. ಸುಳ್ಳು ಆರೋಪಕ್ಕೆ ನಾನು ಬೆದರೋದಿಲ್ಲಾ. ಅಫಜಲಪುರ ಜನರ ಸೇವೆಗಾಗಿ ನಾನು ಸದಾ ಸಿದ್ಧ. ನನ್ನ ಅಭಿಮಾನಿಗಳು ಯಾರು ಭಯ ಪಡಬಾರದು. ಜಾಮೀನಿನ ಮೇಲೆ ಬಂದ ಮೇಲೆ ಸಿಐಡಿ ತನಿಖೆಗೆ ಸಹಕರಿಸುತ್ತಿಲ್ಲಾ ಅಂತ ಹೇಳ್ತಿದ್ದಾರೆ. ಆದ್ರೆ ಇದೆಲ್ಲವು ಸುಳ್ಳು. ರಾಜಕೀಯ ಕುತಂತ್ರದಿಂದ ಸಿಲುಕಿಸಿದ್ರೋ ಅವರಿಗೆ ಹೇಳ್ತೇನೆ. ಇಂತಹ ಇನ್ನು ಹತ್ತು ಸುಳ್ಳು ಕೇಸ್ ಹಾಕಿದ್ರು ನಾನು ಹೆದರಲ್ಲ. ನನ್ನ ಸಾಮಾಜಿಕ ಸೇವೆಯನ್ನು ನಿಲ್ಲಿಸೋದಿಲ್ಲಾ ಎಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ.