ಬಿಗ್​ ಬಾಸ್ ಸೀಸನ್ 8 ಮತ್ತೆ ಆರಂಭ..!

92
firstsuddi

ಬೆಂಗಳೂರು : ಕೊರೊನಾ ಹಾವಳಿಯಿಂದ ಅರ್ಧಕ್ಕೆ ನಿಂತಿದ್ದ ‘ಬಿಗ್ ಬಾಸ್ ಸೀಸನ್ 8’ ಇದೀಗ ಮತ್ತೆ ಆರಂಭವಾಗಲಿದೆ.

ಈ ಬಾರಿ ಬಿಗ್ ಬಾಸ್ ನಲ್ಲಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಇರುವಾಗಲೇ ಕಾರ್ಯಕ್ರಮ ಅರ್ಧಕ್ಕೆ ಮೊಟಕುಗೊಂಡಿತ್ತು. ಅಲ್ಲದೇ ಶೋ ಅರ್ಧಕ್ಕೆ ನಿಂತಾಗ ಪ್ರೇಕ್ಷಕರಿಗೆ ಬೇಸರ ಆಗಿತ್ತು. ಆದರೆ ಇದೀಗ ಮತ್ತೆ ಆರಂಭವಾಗುವ ಬಗ್ಗೆ ಕಲರ್ಸ್ ಕನ್ನಡವು ತನ್ನ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತ ಮಾಹಿತಿ ನೀಡಿದ್ದು, ದಿನಾಂಕ ಕೂಡ ಖಚಿತಪಡಿಸಿದೆ. ಬಿಗ್ ಬಾಸ್ ಸೆಕೆಂಡ್ ಇನಿಂಗ್ಸ್ ಮೊದಲ ದಿನದ ಸಂಚಿಕೆಯು ಜೂನ್ 23ರಂದು ಅಂದರೆ ಇದೇ ಬುಧವಾರ ಸಂಜೆ 6ಕ್ಕೆ ಪ್ರಸಾರವಾಗಲಿದೆ. 12 ಮಂದಿ ಸ್ಪರ್ಧಿಗಳು ತಯಾರಿದ್ದು, ಅರ್ಧಕ್ಕೆ ನಿಂತಿದ್ದ ಕನಸು ಮುಂದುವರಿಯುತ್ತಾ? ಅಥವಾ ಹೊಸ ಕನಸು ಶುರುವಾಗುತ್ತಾ ಎಂಬುವುದನ್ನು ಕಾದು ನೋಡಬೇಕಿದೆ.