ತರುವೆ ಗ್ರಾ.ಪಂ ಚುನಾವಣೆ : ಅಧ್ಯಕ್ಷರಾಗಿ ಬಿ.ಎಂ ಸತೀಶ್, ಉಪಾಧ್ಯಕ್ಷರಾಗಿ ಸ್ಮಿತಾ ಆಯ್ಕೆ…

47
firstsuddi

ಕೊಟ್ಟಿಗೆಹಾರ : ತರುವೆ ಗ್ರಾ.ಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆ ಇಂದು ನಡೆದಿದ್ದು ಅಧ್ಯಕ್ಷರಾಗಿ ಬಿ.ಎಂ ಸತೀಶ್, ಉಪಾಧ್ಯಕ್ಷರಾಗಿ ಸ್ಮಿತಾ ಅವಿರೋಧವಾಗಿ ಆಯ್ಕೆಯಾದರು.

ನಂತರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ತರುವೆ ಗ್ರಾ.ಪಂ ನೂತನ ಅಧ್ಯಕ್ಷ ಬಿ.ಎಂ ಸತೀಶ್, ತರುವೆ ಗ್ರಾ.ಪಂಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಎಲ್ಲಾ ಜನಪ್ರತಿನಿಧಿಗಳು ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಕಂಕಣಬದ್ದರಾಗಿದ್ದೇವೆ. ಗ್ರಾಮದ ಕಟ್ಟಕಡೆಯ ಜನರಿಗೂ ಸರ್ಕಾರದ ಯೋಜನೆಗಳ ಸವಲತ್ತು ತಲುಪಿಸಲು ಶ್ರಮಿಸುತ್ತೇನೆ. ತರುವೆ ಗ್ರಾ.ಪಂಯನ್ನು ಅಭಿವೃದ್ದಿಯತ್ತ ಕೊಂಡೊಯ್ದು ಮಾದರಿ ಗ್ರಾಮ ಪಂಚಾಯತಿಯಾಗಿಸಲು ಎಲ್ಲರ ಸಹಕಾರ ಅಗತ್ಯ. ಕೊಟ್ಟಿಗೆಹಾರವೂ ಸದಾ ಪ್ರವಾಸಿಗರಿಂದ ತುಂಬಿರುವುದರಿಂದ ಗ್ರಾ.ಪಂ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ದಿ ಪಡಿಸಿ ಗ್ರಾಮದ ಅಭವೃದ್ದಿಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರು ಅಧ್ಯಕ್ಷರಾಗಿ ಅವಿರೋದವಾಗಿ ಆಯ್ಕೆಯಾದ ಬಿ.ಎಂ ಸತೀಶ್, ಉಪಾಧ್ಯಕ್ಷರಾದ ಸ್ಮಿತಾ ಹಾಗೂ ಸದಸ್ಯರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ವೆಂಕಟೇಶ್, ತರುವೆ ಗ್ರಾ.ಪಂ ನೂತನ ಸದಸ್ಯರಾದ ರಘು, ಸ್ವರೂಪ, ಸುಶೀಲ, ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ. ನಿಂಗಯ್ಯ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರಗೌಡ, ಉಪಾಧ್ಯಕ್ಷ ಪ್ರಭಾಕರ್ ಬಿನ್ನಡಿ, ಪ್ರಧಾನ ಕಾರ್ಯದರ್ಶಿ ಸಂಪತ್ ಬಿಳುಗುಳ, ಬಣಕಲ್ ಹೋಬಳಿ ಅಧ್ಯಕ್ಷ ಸುಬ್ರಮಣ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‍ಕುಮಾರ್, ಮುಖಂಡರಾದ ರಾಮಚಂದ್ರೆಗೌಡ, ಗೋಪಾಲಗೌಡ, ವೆಂಕಟೇಶ್, ಸೋಮಯ್ಯ, ಎಂ.ಎಸ್.ಅನಂತು, ಟಿ.ಎ ಖಾದರ್, ಮುಂತಾದವರು ಇದ್ದರು.