ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ನಿರ್ಮಾಪಕ, ಹಾಗೂ ನಟ ಆಗಿರುವ ಎಸ್.ನಾರಾಯಣ್ ಅವರ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಎಸ್.ನಾರಾಯಣ್ ಅವರ ಎರಡನೇ ಪುತ್ರ ಪವನ್ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ಬೆಳಗ್ಗೆ 7.30 ರಿಂದ 8.30ಕ್ಕೆ ನಡೆದ ಶುಭ ಮುಹೂರ್ತದಲ್ಲಿ ಪವಿತ್ರ ಅವರನ್ನು ವರಿಸಿದ್ದಾರೆ. 10.30ರ ನಂತರ ಆರತಕ್ಷತೆ ನಡೆದಿದ್ದು, ಆರತಕ್ಷತೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ, ನಟ ಶ್ರೀ ಮುರುಳಿ, ಸುಧಾರಾಣಿ, ಮುಖ್ಯಮಂತ್ರಿ ಚಂದ್ರು, ಸಚಿವ ಗೋಪಾಲಯ್ಯ, ನಟಿ ಅಮೂಲ್ಯ, ಸಂಸದೆ ಸುಮಲತಾ, ನಟ ಶರಣ್ ಸೇರಿದಂತೆ ಕೆಲವು ಗಣ್ಯರು ಭಾಗಿಯಾಗಿ ಶುಭ ಹಾರೈಸಿದ್ದಾರೆ.










