ದಾವಣಗೆರೆ : ಪೊಲೀಸರಿಂದ ರಂಜಾನ್ ಹಬ್ಬಕ್ಕೆ ಆಹಾರ ಕಿಟ್ ವಿತರಣೆ…

101
firstsuddi

ದಾವಣಗೆರೆ : ಲಾಕ್ ಡೌನ್ ನಿಂದಾಗಿ ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಜನರು ಸಾಕಷ್ಟು ತೊಂದರೆ ಪಡುವಂತಾಗಿದೆ. ಇದರ ಮಧ್ಯೆಯೂ ರಂಜಾನ್ ಹಬ್ಬ ಬಂದಿದ್ದು, ಆಚರಿಸೋದು ಹೇಗೆಂಬ ಸಂಕಷ್ಟದಲ್ಲಿದ್ದಾರೆ. ಆಜಾದ್ ನಗರ, ಭಾಷಾನಗರ ಸೇರಿ ಹಲವು ಕಡೆಗಳಲ್ಲಿ ಕೂಲಿ ಮಾಡಿ ಜೀವನ ನಡೆಸುವ ಜನರೇ ಜಾಸ್ತಿ ಇದ್ದು, ಈಗ ರಂಜಾನ್ ಹಬ್ಬ ಕೂಡ ಬಂದಿದ್ದರಿಂದ ಕೂಲಿ ಇಲ್ಲದೆ ಹಬ್ಬ ಆಚರಣೆ ಮಾಡಲು ಸಂಕಷ್ಟ ಅನುಭವಿಸುತ್ತಿದ್ದರು. ಇವರ ಕಷ್ಟವನ್ನು ನೋಡಿದ ಜಿಲ್ಲೆಯ ಅಜಾದ್ ನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಶೈಲಜಾ ಅವರು ತಮ್ಮ ಸ್ವಂತ ಖರ್ಚಿನಲ್ಲಿ 50ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ ಮಾಡಿದರು.

ಪೊಲೀಸ್ ಅಧಿಕಾರಗಳ ಮೂಲಕವೇ  ಕಿಟ್ ವಿತರಣೆ ಮಾಡಿಸಿದ್ದು, ಅಜಾದ್ ನಗರ ಪೊಲೀಸರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.