ದೇವೇಂದ್ರ ಫಡ್ನವಿಸ್ ಭೇಟಿಯಾದ ರಮೇಶ್ ಜಾರಕಿಹೊಳಿ – ಸಚಿವ ಸ್ಥಾನಕ್ಕಾಗಿ ಲಾಬಿ…

101
firstsuddi

ಬೆಳಗಾವಿ : ರಮೇಶ್ ಜಾರಕಿಹೊಳಿ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಮೂಲಕ ಸಚಿನ ಸ್ಥಾನ ಗಿಟ್ಟಿಸಿಕೊಳ್ಳಲು ಲಾಬಿ ನಡೆಸಿದ್ದಾರೆ. ಗೋವಾದ ಪಣಜಿಯಲ್ಲಿರುವ ಹೋಟೆಲ್ ನಲ್ಲಿ ತಂಗಿರುವ ದೇವೇಂದ್ರ ಫಡ್ನವಿಸ್ ಭೇಟಿ ಮಾಡಿದ ರಮೇಶ್ ಜಾರಕಿಹೊಳಿ ಈ ಕುರಿತಂತೆ ಚರ್ಚೆ ನಡೆಸಿದ್ದಾರೆ.

ಬಿಜೆಪಿ ಸರ್ಕಾರ ತರಲು ಕಾರಣವಾಗಿದ್ದ ನಮ್ಮನ್ನು ಸಂಪುಟದಿಂದ ದೂರ ಇಡಲಾಗಿದೆ. ನನ್ನ ವಿರುದ್ಧ ಷಡ್ಯಂತ್ರ ಮಾಡಿ ಸಂಪುಟದಿಂದ ಕೈಬಿಡಲಾಗಿದೆ. ಹಾಗಾಗಿ ಈ ಬಾರಿ ಸಂಪುಟ ವಿಸ್ತರಣೆ ವೇಳೆ ನಮ್ಮನ್ನು ಪರಿಗಣಿಸಲು ಹೈಕಮಾಂಡ್ ನಾಯಕರ ಮನವೊಲಿಸುವಂತೆ ರಮೇಶ್ ಜಾರಕಿಹೊಳಿ ಫಡ್ನವಿಸ್ ಅವರಲ್ಲಿ ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ಆಪ್ತ ಅಶೋಕ್ ಅಸೂದೆ ಹಾಗೂ ಬೆಳಗಾವಿ ಬಿಜೆಪಿ ಮುಖಂಡ ಕಿರಣ್ ಜಾಧವ್ ಸಾಥ್ ನೀಡಿದರು.