ರಾಮನಗರ : ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ಅವರು ನಿನ್ನೆ ಹೃದಯಾಘಾತದಿಂದ ಮೃತಪಟ್ಟಿದ್ದು, ಇಂದು ಮಧ್ಯಾಹ್ನ ಅವರ ಅಂತ್ಯಸಂಸ್ಕಾರ ನೆರವೇರಲಿದೆ. ನಗರದ ನೆಲಗುಳಿ ಬಳಿ ಇರುವ ನಟ ಧ್ರುವಾ ಸರ್ಜಾ ಅವರ ಫಾರ್ಮ್ ಹೌಸ್ನಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗುತ್ತಿದ್ದು, ಬಸವಗುಡಿಯಲ್ಲಿ ಇರುವ ಚಿರಂಜೀವಿ ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದ್ದು, ಇನ್ನೂ ಕೆಲವೇ ಗಂಟೆಯಲ್ಲಿ ಚಿರಂಜೀವಿ ಅವರ ಮೃತದೇಹವನ್ನು ಧ್ರುವಾ ಸರ್ಜಾ ಅವರ ಫಾರ್ಮ್ ಹೌಸ್ಗೆ ತಂದು ಮಧ್ಯಾಹ್ನದ ವೇಳೆಗೆ ಗೌಡರ ಸಂಪ್ರದಾಯದಂತೆ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಗುವುದು.










