ನಗರಸಭೆ ಚುನಾವಣೆ : ಗೆಲುವಿಗಾಗಿ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಹೇಮಾವತಿ ಸದಾಶಿವ.

108
firstsuddi

ಚಿಕ್ಕಮಗಳೂರು: ನಗರಸಭೆ ಚುನಾವಣೆಯ 10ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಹೇಮಾವತಿ ಸದಾಶಿವ ಅವರು ತಮ್ಮ ಗೆಲುವಿಗಾಗಿ ವಿಘ್ನ ವಿನಾಶಕ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು.

ನಿನ್ನೆ ಬೆಳಿಗ್ಗೆ ನಗರದ ಎಂ.ಜಿ.ರಸ್ತೆಯ ಗಣಪತಿ ದೇವಾಲಯಕ್ಕೆ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ತೆರಳಿದ ಅವರು ಚುನಾವಣೆಯಲ್ಲಿನ ವಿಘ್ನ ನಿವಾರಣೆ ಮತ್ತು ಗೆಲುವಿಗಾಗಿ ಪ್ರಾರ್ಥಿಸಿ ಸಂಕಷ್ಟ ಹರ ಗಣಪತಿ ವ್ರತ ಹಾಗೂ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಬೆಲ್ಟ್‍ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಚುನಾವಣೆಯಲ್ಲಿ ತಾವು ಗೆಲುವು ಸಾಧಿಸಿದಲ್ಲಿ ವಾರ್ಡ್‍ನ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಬಿಜೆಪಿಯ ಕಳೆದ 15 ವರ್ಷಗಳ ದುರಾಡಳಿತ ಮತ್ತು ಭ್ರಷ್ಟಾಚಾರದಿಂದಾಗಿ ತಮ್ಮ ವಾರ್ಡಿನ ಎಲ್ಲಾ ರಸ್ತೆಗಳು ಒಳಚರಂಡಿಗಳು ಹಾಳಾಗಿವೆ. ಬಡಾವಣೆಯಲ್ಲಿ ಬೀದಿದೀಪ, ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆ ಉಂಟಾಗಿದೆ ಇದನ್ನು ವಾರ್ಡಿನ ಮತದಾರರು ಮನಗಂಡಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಗೆಲುವು ನಿಶ್ವಿತವಾಗಿದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಜೆ. ವಿನಾಯಕ, ಸದಾಶಿವ, ಬಿ.ಡಿ.ಸುರೇಶ್, ಸಿ.ಕೆ.ಶ್ರೀಕಾಂತ್ ಹಾಜರಿದ್ದರು.