ನಟಿ ಸಂಜನಾ ಗಲ್ರಾನಿ ವಿರುದ್ಧ ಮಾನನಷ್ಠ ಮೊಕದ್ದಮೆ ಹೂಡಿದ ನಿರ್ಮಾಪಕಿ ವಂದನಾ ಜೈನ್…

200
firstsuddi

ಬೆಂಗಳೂರು : ಸ್ಯಾಂಡಲ್‍ವುಡ್ ಸಂಜನಾ ಹಾಗೂ ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ಅವರ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಂದನಾ ಜೈನ್ ಅವರು ಸಂಜನಾ ಅವರ ವಿರುದ್ಧ 4ಕೋಟಿ ರೂ. ಮಾನನಷ್ಠ ಮೊಕದ್ದಮೆಯನ್ನು ದಾಖಲು ಮಾಡಿದ್ದಾರೆ. ಸಂಜನಾ ಅವರ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪವನ್ನು ಮಾಡಿದ್ದಾರೆ. ಅವರು ಮಾಡಿದ ಗಲಾಟೆಯಿಂದ ನನ್ನ ಕಣ್ಣಿನ ಮೇಲೆ ಗಾಯವಾಗಿದೆ. ನನ್ನ ವೈಯಕ್ತಿಕ ವಿಚಾರಗಳನ್ನೆಲ್ಲಾ ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ. ಇದರಿಂದ ನನಗೆ ಅವಮಾನವಾಗಿದೆ ಎಂದು ಸಂಜನಾ ಅವರ ವಿರುದ್ಧ 4ಕೋಟಿ. ರೂ. ಮಾನನಷ್ಠ ಮೊಕದ್ದಮೆಯನ್ನು ಹೂಡಿದ್ದಾರೆ. ಅಲ್ಲದೇ ಸಂಜನಾ ಅವರಿಗೆ ಲೀಗಲ್ ನೋಟೀಸ್ ಕೂಡಾ ನೀಡಿದ್ದಾರೆ.