ನಮಗೆ ಅವರ ಬಗ್ಗೆ ಟೀಕೆ ಮಾಡುವಷ್ಟು ಶಕ್ತಿಯಿಲ್ಲ : ಹೆಚ್.ಡಿ.ದೇವೇಗೌಡ.

102
firstsuddi

ವಿಜಯಪುರ : ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಒಬ್ಬ ಡ್ರಗ್ ಪೆಡ್ಲರ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಗೆ ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡರು, ನಮಗೆ ಅವರ ಬಗ್ಗೆ ಟೀಕೆ ಮಾಡುವಷ್ಟು ಶಕ್ತಿಯಿಲ್ಲ ಎಂದು ಹೇಳಿದ್ದಾರೆ.

ಜಿಲ್ಲೆಯ ಸಿಂದಗಿ ಕ್ಷೇತ್ರದ ರಾಮಪುರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಉಪಚುನಾವಣೆಗಿಂತ ಹೆಚ್ಚಾಗಿ ಕಾಂಗ್ರೆಸ್, ಬಿಜೆಪಿ ಮುಖಂಡರ ಮಧ್ಯೆ ಸ್ಪರ್ಧೆ ಇದೆ. ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿ, ವ್ಯಕ್ತಿಗರ ನಿಂದನೆ ಮಾಡುವ ಹವ್ಯಾ ಹಚ್ಚಿಕೊಂಡಿದ್ದಾರೆ ಎಂದರು.

ಹೆಚ್.ಡಿ.ಕುಮಾರಸ್ವಾಮಿ ವಿರುದ್ಧದ ಬೈಗಮಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಟ್ವೀಟ್ ನಿಂದ ಚುನಾವಣೆಯಲ್ಲಾಗಲೀ, ರಾಜಕೀಯದಲ್ಲಾಗಲಿ ಗೆಲ್ಲಲು ಆಗಲ್ಲ. ಅದರಿಂದ ಲಾಭ ಸಿಗುತ್ತೇ ಅಂದ್ರೆ ಎಷ್ಟು ಬೇಕಾದ್ರು ಮಾಡಿಕೊಳ್ಳಲಿ ಅದಕ್ಕೆ ನನ್ನ ಅಭ್ಯಂತರವಿಲ್ಲ. ಎರಡೂ ಪಕ್ಷಗಳಿಗೆ ಹಣಕಾಸಿನ ಶಕ್ತಿಯಿದೆ, ಈ ರೀತಿ ವೈಯಕ್ತಿಕ ಟೀಕೆಗಳ ಮಾಡಿದ್ರೆ ಲಾಭ ಅಂತ ಅವರು ತಿಳಿದಿದ್ದಾರೆ. ಅವರಿಗೆ ಬುದ್ಧಿ ಹೇಳೋ ಶಕ್ತಿ ನನಗಿಲ್ಲ ಎಂದರು.