ನಾಗಚೈತನ್ಯ ಸಖತ್ ಇಷ್ಟ. ಅವರನ್ನು ಮದುವೆ ಆಗೋದೇ ನನ್ನ ಜೀವನದ ಟಾರ್ಗೆಟ್ ಎಂದ ನಟಿ…

85
firstsuddi

ನಾಗಚೈತನ್ಯ ಅವರು ಟಾಲಿವುಡ್​ನ ಬೇಡಿಕೆಯ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ನಾಗಚೈತನ್ಯ ಅವರು ಸಮಂತಾ ಜೊತೆಗಿನ ಡಿವೋರ್ಸ್ ಬಳಿಕ ಹೆಚ್ಚೆಚ್ಚು ಸುದ್ದಿಯಲ್ಲಿದ್ದಾರೆ. ನಾಗಚೈತನ್ಯ ರಿಲೇಶನ್‌ಶಿಪ್ ಸ್ಟೇಟಸ್, 2ನೇ ಮದುವೆ ಬಗ್ಗೆ ಹಲವು ವಿಚಾರಗಳು ಹರಿದಾಡುತ್ತಿವೆ. ಹೀಗಿರುವಾಗ ನಾಗ ಚೈತನ್ಯ ಅವರನ್ನು ಮದುವೆ ಆಗೋದೇ ನನ್ನ ಟಾರ್ಗೆಟ್ ಎಂದು ಹೇಳಿಕೆ ನೀಡುವ ಮೂಲಕ ನಟಿ ರೀತು ಚೌಧರಿ ಸೆನ್ಸೇಷನ್ ಸೃಷ್ಟಿ ಮಾಡಿದ್ದಾರೆ.

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, ನನಗೆ ನಾಗಚೈತನ್ಯ ಎಂದರೆ ಸಖತ್ ಇಷ್ಟ. ಅವರನ್ನು ಮದುವೆಯಾಗೋದೇ ನನ್ನ ಜೀವನದ ಟಾರ್ಗೆಟ್ ಆಗಿದೆ. ಡಿವೋರ್ಸ್ ಆಗಿರುವ ವ್ಯಕ್ತಿಯನ್ನು ಮತ್ತೆ ಮದುವೆ ಆಗೋದಕ್ಕೆ ನನಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ. ಸದ್ಯ ರೀತು ಚೌಧರಿ ನೀಡಿರುವ ಹೇಳಿಕೆ ಸಖತ್ ವೈರಲ್ ಆಗಿದೆ.

ನಟಿಯ ಮಾತಿಗೆ ನಾಗಚೈತನ್ಯ ಅವರು ಯಾವ ರೀತಿಯಲ್ಲಿ ಉತ್ತರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ರೀತು ಅವರು ‘ಗೋರಿಂಟಕು’ ಸೀರಿಯಲ್‌ನಲ್ಲಿ ಗಾಯತ್ರಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ.

2021ರಲ್ಲಿ ಸಮಂತಾಗೆ ನಾಗಚೈತನ್ಯ ಡಿವೋರ್ಸ್ ಕೊಟ್ಟ ಮೇಲೆ ಶೋಭಿತಾ ಜೊತೆ ನಟನ ಹೆಸರು ಸದ್ದು ಮಾಡಿತ್ತು. ಇದಾದ ಬಳಿಕ ಇತ್ತೀಚೆಗೆ ಖ್ಯಾತ ಉದ್ಯಮಿ ಪುತ್ರಿ ಜೊತೆ ಸಮಂತಾ ಮಾಜಿ ಪತಿಯ ಮದುವೆ ಎಂದು ಹೇಳಲಾಗಿತ್ತು.