ಬೆಂಗಳೂರು : ಬಿಜೆಪಿ ಪಕ್ಷದ ವಿರುದ್ಧ ಕಾಂಗ್ರೆಸ್ ಕರ್ನಾಟಕ ಟ್ವೀಟ್ ಮಾಡಿದ್ದು, ಮಹದಾಯಿ ನದಿ ವಿವಾದವನ್ನು ಪರಿಹರಿಸಲು ವಿಫಲರಾದ ಮತ್ತು ಕೇಂದ್ರ ಸರ್ಕಾರದ ಬಳಿ ಕರ್ನಾಟಕದ ರೈತರ ಪರವಾಗಿ ಅಪ್ಪಿ ತಪ್ಪಿಯೂ ದನಿ ಎತ್ತದ ಬಿಜೆಪಿ ಕರ್ನಾಟಕ ಅನ್ನು ತಿರಸ್ಕರಿಸಿ, ರೈತರ ಸಾಲ ಮನ್ನಾ ಮಾಡಿ ಮಹದಾಯಿ ವಿವಾದ ಪರಿಹಾರಕ್ಕಾಗಿ ಹೋರಾಟ ನಡೆಸಿ, ರೈತರಿಗೆ ನೆರವಾದ ಕಾಂಗ್ರೆಸ್ ಅನ್ನು ಬೆಂಬಲಿಸಿ. ನಾಡಿನ ಸಮಸ್ತ ಮತದಾರರು ತಪ್ಪದೇ ಮತ ಚಲಾಯಿಸಿ : ಚೆಕ್ ಮೂಲಕ ಲಂಚ ಪಡೆದು ಜೈಲಿಗೆ ಹೋಗಿ ಕರ್ನಾಟಕ ರಾಜ್ಯದ ಮರ್ಯಾದೆ ಹಾಳು ಮಾಡಿ ಈಗ ಚೌಕೀದಾರನ ಮುಖವಾಡ ಧರಿಸಿ ತಿರುಗುತ್ತಿರುವ ಬಿ.ಎಸ್.ವೈ ಅಂತಹ ಲೂಟಿಕೋರರ ಮುಖವಾಡವನ್ನು ಕಳಚಿ, ದೇಶವನ್ನು ರಕ್ಷಿಸಿ, ಸಂವಿಧಾನವನ್ನು ಉಳಿಸಿ. ರೈತರ ವಿಮಾ ಹಣವನ್ನು ಶ್ರೀಮಂತ ಕಂಪನಿಗಳಿಗೆ ನೀಡುವ ಕೆಲಸವನ್ನು ಬಿಜೆಪಿ ಮಾಡಿದ್ದರೆ. ರೈತರ ಸಾಲಮನ್ನಾ ಮಾಡಿ, ರೈತರಿಗೆ ಕೃಷಿ ಭಾಗ್ಯ, ಬಡವರಿಗೆ ಅನ್ನ ಭಾಗ್ಯ ಹಾಗೂ ಮಹಿಳೆಯರಿಗೆ ಮಾತೃಪೂರ್ಣದಂತಹ ಯೋಜನೆಯನ್ನು ಜಾರಿಗೊಳಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದೆ ಎಂದು ಟ್ವೀಟ್ ಮಾಡಿದೆ.












