ಮೂಡಿಗೆರೆ : ತಾಲೂಕಿನಲ್ಲಿ ತನ್ನ ವಿರುದ್ಧ ಕಾರ್ಯಕರ್ತರು ಆಕ್ರೋಶಗೊಂಡ ಹಿನ್ನೆಲೆ ಘಟನೆಯನ್ನು ನೆನೆದು ಶಾಸಕ ಎಂ.ಪಿ ಕುಮಾರಸ್ವಾಮಿ ಕಣ್ಣೀರಿಟ್ಟಿದ್ದಾರೆ.
ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಿನ್ನೆ ತಾಲೂಕಿಗೆ ಆಗಮಿಸಿತ್ತು. ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸದಾನಂದಗೌಡ ಕೂಡ ಆಗಮಿಸಿದ್ದರು. ಈ ವೇಳೆ ಸಾವಿರಾರು ಕಾರ್ಯಕರ್ತರು ಕುಮಾರಸ್ವಾಮಿಗೆ ಟಿಕೆಟ್ ಬೇಡವೇ ಬೇಡ ಎಂದು ಆಕ್ರೋಶ ಹೊರಹಾಕಿದರು. ಬಿಎಸ್ ವೈ ರೋಡ್ ಶೋ ನಡೆಸದೇ ವಾಪಸ್ ತೆರಳಿದರು. ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ ಘಟನೆಯನ್ನು ನೆನೆದು ಕಣ್ಣೀಟ್ಟಿದ್ದಾರೆ.
ನಾನು ದಲಿತನಾಗಿದ್ದಕ್ಕೆ ಹೀಗೆಲ್ಲಾ ಮಾಡಿದ್ದಾರೆ. ಬೇರೆ ಸಾಮಾನ್ಯ ವರ್ಗದ ಶಾಸಕ, ಪರಿಷತ್ ಸದಸ್ಯರಾಗಿದ್ದರೆ ಹೀಗೆ ಮಾಡುತ್ತಿದ್ದರಾ ಎಂದು ಪ್ರಶ್ನಿಸಿದ್ದಾರೆ. ಕೆಲವರು ಬೇಕು ಎಂದೇ ಹೀಗೆ ಮಾಡಿದ್ದಾರೆ. ಯಡಿಯೂರಪ್ಪ ನನ್ನನ್ನು 100 ಮೀಟರ್ ದೂರಕ್ಕೆ ಕರೆದೊಯ್ದು ಸಮಾಧಾನ ಮಾಡಿದ್ದಾರೆ. ಟಿಕೆಟ್ ನಿನಗೆ ಸಿಗಲಿದೆ. ನೀನೇ ಗೆಲ್ಲುವುದು ಎಂದಿದ್ದಾರೆ ಎಂದರು.
ನನಗೆ ಹೆಂಡತಿ-ಮಕ್ಕಳು ಇಲ್ಲ. ಪಕ್ಷಕ್ಕಾಗಿ ದುಡಿದು-ಹೋರಾಡಿದ್ದೇನೆ. ಘಟನೆಯ ಬಗ್ಗೆ ಬಿಎಸ್ ವೈ ಹಾಗೂ ಸದಾನಂದಗೌಡರಿಗೆ ಕ್ಷಮೆ ಕೇಳುತ್ತೇನೆ. ನನ್ನ ಗೆಲುವನ್ನು ಸಹಿಸಿಕೊಳ್ಳದವರು ಈ ರೀತಿ ಮಾಡುತ್ತಿದ್ದಾರೆ ಎಂದರು.