ಸಿದ್ದರಾಮಯ್ಯ ದರ್ಪ, ಡಿ.ಕೆ. ಶಿವಕುಮಾರ್ ಫೋಸ್ ಕೊಡೋಕೆ ಮಾತ್ರ ನಾಯಕರಾಗಿದ್ದಾರೆ : ರಮೇಶ್ ಜಾರಕಿಹೊಳಿ.

297
firstsuddi

ಬೆಳಗಾವಿ : ನಾನು ಬಿಜೆಪಿ ಸೇರುವ ಹಿಂದಿನ ದಿನ ರಾತ್ರಿ ನನಗೆ ಒಂದು ನಿಮಿಷವೂ ನಿದ್ದೆ ಬರಲಿಲ್ಲ. ನಾನು ಮಾಜಿ ಪ್ರಧಾನಿ ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಅಪ್ಪಟ ಅಭಿಮಾನಿ ಎಂದು ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಅವರು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ದುಃಖವನ್ನು ನಾನು ಬಹಿರಂಗವಾಗಿ ಹೇಳಿಕೊಳ್ಳುವ ಸ್ಥಿತಿಯಲ್ಲಿ ನಾನಿಲ್ಲ. ಎಲ್ಲಾ ದುಃಖವನ್ನು ನುಂಗಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನಾನು ಕಾಂಗ್ರೆಸ್‍ನಲ್ಲೇ ಉಳಿದಿದ್ದರೇ ನನ್ನನ್ನು ನಿರ್ನಾಮ ಮಾಡುತ್ತಿದ್ದರು ಎಂದು ಕಾಂಗ್ರೆಸ್ ಪಕ್ಷವನ್ನು ನೆನೆದು ಭಾವುಕರಾದರು.

ನಾನು ಮಾಜಿ ಪ್ರಧಾನಿ ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಅಪ್ಪಟ ಅಭಿಮಾನಿ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಬ್ಯಾಗ್ ಹಿಡಿದು ಬಾಗಿಲು ಕಾಯುವವರು ಮಾತ್ರ ಲೀಡರ್ ಆಗಿರುತ್ತಾರೆ. ಕಾಂಗ್ರೆಸ್‍ನಲ್ಲಿ ಈಗಾ ಮಾಸ್ ಲೀಡರ್‍ಗಳಿಗೆ ಯಾವುದೇ ಬೆಲೆ ಇಲ್ಲ. ಸಿದ್ದರಾಮಯ್ಯ ಅವರು ಪಕ್ಷವನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ. ಪಕ್ಷದಲ್ಲಿ ಏನಾದರೂ ಮಲ್ಲಿಕಾರ್ಜುನ ಖರ್ಗೆ ಅವರು ನೋಡಲ್ಲ. ಸಿದ್ದರಾಮಯ್ಯ ದರ್ಪ, ಡಿ.ಕೆ. ಶಿವಕುಮಾರ್ ಫೋಸ್ ಕೊಡೋಕೆ ಮಾತ್ರ ನಾಯಕರಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಬ್ಲ್ಯಾಕ್ ಮೇಲ್ ಮಾಡುವ ಧೈರ್ಯನೂ ಮಾಡಲ್ಲ. ಸಿದ್ದರಾಮಯ್ಯ ಎರಡನ್ನೂ ಮಾಡಿ ಮುಖ್ಯಮಂತ್ರಿ ಆದರು. ನಿಷ್ಠಾವಂತರಿಗೆ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬೆಲೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ ಅನೇಕ ವರ್ಷಗಳಿಂದ ಸತೀಶ ಜಾರಕಿಹೊಳಿ ನನ್ನನ್ನು ವಿರೋಧಿಸುತ್ತ ಬಂದಿದ್ದಾರೆ. ಆದರೆ ಲಖನ್ ಜಾರಕಿಹೊಳಿ ನನ್ನ ಜತೆಗೆ ಇದ್ದುಕೊಂಡೆ ಮೋಸ ಮಾಡಿದ್ದು ದುಖಃವಾಗಿದೆ. ಇದನ್ನು ನೋಡಿ ಜೀವನದಲ್ಲಿ ಜಿಗುಪ್ಸೆ ಬಂದಿದೆ. ನಮ್ಮ 5 ಜನ ಸಹೋದರರಲ್ಲಿ ಇಷ್ಟು ದಿನ ಆಟವಾಡಿದ್ದೇ ಲಖನ್. ಸಹೋದರರನ್ನು ಬೇರೆ ಮಾಡಿ ಅದರ ಲಾಭವನ್ನು ಲಖನ್ ಪಡೆಯುತ್ತಿದ್ದಾನೆ. ನಾನು ಸತೀಶ ಜಾರಕಿಹೊಳಿಯನ್ನು ಸಿಎಂ ಮಾಡುತ್ತೇನೆ ಎಂದು ಹೇಳಿದ್ದೆ. ಸತೀಶ್ ಸಿಎಂ ಆಗುವುದನ್ನು ಲಖನ್ ಜಾರಕಿಹೊಳಿಗೆ ಸಹಿಸಲು ಆಗಲಿಲ್ಲ, ಈ ಬಗ್ಗೆ ನನ್ನ ಜತೆಗೆ ಒಮ್ಮೆ ಲಖನ್ ಜಾರಕಿಹೊಳಿ ಜಗಳ ಆಡಿದ್ದ. ಲಖನ್ ಮತ್ತು ಸತೀಶ್ ಜಗಳವಾಡುವಾಗ ಸತೀಶ್ನ ಸಿಎಂ ಮಾಡಲು ರಮೇಶ್ ಹೊರಟ್ಟಿದ್ದಾರೆ ಎಂದು ಲಖನ್ ಹಲವರ ಮುಂದೆ ಹೇಳಿಕೊಂಡಿದ್ದಾರೆ ಎಂದರು.