ಮುಂಬೈ : ಸುದ್ದಿಗಾರರೊಂದಿಗೆ ಮಾತನಾಡಿದ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಅವರು ಮೈತ್ರಿ ಸರ್ಕಾರಕ್ಕೆ ಮತ್ತೊಂದು ಶಾಕ್ ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಏನೇ ಪ್ರಯತ್ನ ಮಾಡಿದರು ನಾವು ರಾಜೀನಾಮೆ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ಕಳೆದ ಒಂದೂವರೆ ವರ್ಷದಿಂದ ನಿರಂತರ ಪ್ರಯತ್ನಪಟ್ಟು ಈಗಾ ಕೊನೆಯ ಹಂತಕ್ಕೆ ಬಂದಿದ್ದೇವೆ. ಅದು ಅಲ್ಲದೆ ಇನ್ನು ನಾಲ್ಕು ಮಂದಿ ಅತೃಪ್ತ ಶಾಸಕರು ನಮ್ಮನ್ನು ಸೇರಿಕೊಳ್ಳಲಿದ್ದಾರೆ. ಡಿ.ಕೆ. ಶಿವಕುಮಾರ್ ಅವರನ್ನು ನಾವು ಯಾವುದೇ ಕಾರಣಕ್ಕೂ ಭೇಟಿಯಾಗುವುದಿಲ್ಲ. ಸ್ಪೀಕರ್ ರಮೇಶ್ ಕುಮಾರ್ ಅವರು ಆದಷ್ಟು ಬೇಗ ನಮ್ಮ ರಾಜೀನಾಮೆಯನ್ನು ಅಂಗೀಕರಿಸಿ ಇದರಿಂದ ಮುಕ್ತಿ ನೀಡಬೇಕು. ಒಂದು ವರ್ಷದಿಂದ ಈ ಜಂಜಾಟ ಸಾಕಾಗಿದೆ. ಈ ಡ್ರಾಮಾ ಶೀಘ್ರವೇ ಕೊನೆಯಾಗಬೇಕು. ಇದಕ್ಕೆಲ್ಲಾ ಕಾರಣ ಏನೆಂದು ಸ್ವಲ್ಪ ದಿನಗಳಲ್ಲಿ ಮಾಧ್ಯಮದವರ ಬಳಿ ಹೇಳುತ್ತೇನೆ ಎಂದು ಹೇಳಿದ್ದಾರೆ.










