ಚಿಕ್ಕಮಗಳೂರು : ಸಿಎಂ ಕುಮಾರಸ್ವಾಮಿ ಅವರು ತಮ್ಮ ಟ್ವಿಟರ್ನಲ್ಲಿ ರಾಜ್ಯದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಪ್ರಯತ್ನ ಹಗಲುಗನಸು ಎಂದು ಟ್ವೀಟ್ ಮಾಡಿದ್ದು, ಇದಕ್ಕೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಯಿಸಿದ ಶಾಸಕ ಸಿ.ಟಿ. ರವಿ ಅವರು ನಾವು ಹಗಲು ಕನಸು ಕಾಣುವ ಜನ ಅಲ್ಲ, ಕನಸನ್ನು ನನಸು ಮಾಡುವ ಜನ. ಸಿಎಂ ಅವರು ಸಾಂದರ್ಭಿಕ ಶಿಶು. ಹೀಗಾಗಿ ಇವರಿಗೆ ಕನಸು ಬೀಳುವುದಿಲ್ಲ. ನಾವು ಸರ್ಕಾರ ಬೀಳಿಸುವ ಸಲುವಾಗಿ ಆಪರೇಶನ್ ಕಮಲ ಮಾಡುತ್ತಿಲ್ಲ. ಸರ್ಕಾರವನ್ನು ಬೀಳಿಸುವುದು ನಮ್ಮ ಕೆಲಸವಲ್ಲ. ಸರ್ಕಾರವನ್ನು ಉಳಿಸಿಕೊಳ್ಳುವುದು ಅವರ ಕೆಲಸ. ಸರ್ಕಾರ ಯಾವಾಗ ಪತನವಾಗುತ್ತದೆ ಎಂದು ನಾವು ಕಾಯುತ್ತಿದ್ದೇವೆ ಎಂದು ಹೇಳಿದರು.









