ನಿರಾಣಿ ಬಳಿಕ ಅರವಿಂದ್ ಬೆಲ್ಲದ್ ‘ಕಾಶಿ’ ಯಾತ್ರೆ…

95
firstsuddi

ಬೆಂಗಳೂರು : ಎರಡು ದಿನಗಳ ಹಿಂದೆಯಷ್ಟೇ ಸಚಿವ ಮುರುಗೇಶ್ ನಿರಾಣಿ ವಾರಾಣಸಿಗೆ ಭೇಟಿ ನೀಡಿದ್ದರು. ಇದೀಗ ಶಾಸಕ ಅರವಿಂದ ಬೆಲ್ಲದ್ ಸಹ ಇಂದು ವಾರಾಣಸಿಗೆ ಭೇಟಿ ನೀಡಿದ್ದಾರೆ.

ಜುಲೈ 26ರಂದು ಬಿ.ಎಸ್ ಯಡಿಯೂರಪ್ಪ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದ್ದು, ಇತ್ತ ಸಿಎಂ ಹುದ್ದೆ ಆಕಾಂಕ್ಷಿಗಳ ಪಟ್ಟಿಯಲ್ಲಿ ಬೆಲ್ಲದ್ ಹೆಸರು ಕೂಡ ಕೇಳಿ ಬಂದಿರುವುದರಿಂದ ಬೆಲ್ಲದ್ ಕಾಶಿಯಾತ್ರೆ ಕೈಗೊಂಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ ನಿರಾಣಿ ಬಳಿಕ ಬೆಲ್ಲದ್ ವಾರಾಣಸಿ ಭೇಟಿ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿರ್ಗಮನಕ್ಕೆ ವೇದಿಕೆ ಸಜ್ಜಾಗಿದೆ. ಇತ್ತ 35ಕ್ಕೂ ಹೆಚ್ಚು ಸ್ವಾಮೀಜಿಗಳು ಸಿಎಂ ಭೇಟಿಯಾಗಿ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡದಂತೆ ಒತ್ತಡ ಹೇರಿದ್ದಾರೆ.