ಬೆಳಗಾವಿ : ರಥೋತ್ಸವದ ವೇಳೆ ಪಟಾಕಿ ಕಿಡಿ ತಗುಲಿ ರಥದ ಮೇಲ್ಭಾಗಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ನಿನ್ನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಶಿವಪೇಟೆ ಗ್ರಾಮದ ಜಡಿಶಂಕರಲಿಂಗ ದೇವರ ಜಾತ್ರೆಯ ಪ್ರಯುಕ್ತ ಜಡಿ ಶಂಕರಲಿಂಗ ದೇವರ 38ನೇ ಮಹಾರಥೋತ್ಸವವಿತ್ತು. ಈ ವೇಳೆ ಕೆಲ ಭಕ್ತರು ಪಟಾಕಿ ಸಿಡಿಸಿದ್ದು, ಪಟಾಕಿಯ ಕಿಡಿ ರಥಕ್ಕೆ ತಗುಲಿ, ರಥದ ಮೇಲ್ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಸ್ಥಳೀಯರು ಬೆಂಕಿ ನಂದಿಸಿ, ಭಾರಿ ಅನಾಹುತ ತಪ್ಪಿಸಿದ್ದಾರೆ.










