ನವದೆಹಲಿ : ದೇಶದಲ್ಲಿ ಹೊಸ ರೂಪಾಂತರಿ ಓಮಿಕ್ರಾನ್ ಹೆಚ್ಚುತ್ತಿರುವ ಬೆನ್ನಲ್ಲೇ ಇಂದು ಸಂಜೆ 4ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರ ಸಚಿವರ ಮಂಡಳಿ ಜೊತೆ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಂದು ಸಂಜೆ ವರ್ಚುವಲ್ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದು, ಕೊರೊನಾ ಮೂರನೇ ಅಲೆ ತಡೆಗಟ್ಟುವ ವ್ಯಾಪಕ ಕ್ರಮಗಳ ಕುರಿತು ಅವರು ಚರ್ಚಿಸಲಿದ್ದಾರೆ ಜೊತೆಗೆ, ಮುಂದಿನ ವರ್ಷ ನಡೆಯಲಿರುವ ಉತ್ತರಪ್ರದೇಶ, ಪಂಜಾಬ್ ಚುನಾವಣೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.
ಕಳೆದೊಂದು ವಾರದ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಕೋವಿಡ್-19 ವೈರಸ್ ತಡೆಗಟ್ಟಲು ತೆಗೆದುಕೊಂಡ ಸಿದ್ಧತೆಯ ಕುರಿತು ಪರಿಶೀಲನಾ ಸಭೆ ನಡೆಸಿದ್ದರು.
ಇಂದು ಭಾರತದಲ್ಲಿ 781 ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ದೆಹಲಿಯಲ್ಲಿ 238, ಮಹಾರಾಷ್ಟ್ರದಲ್ಲಿ 167, ಗುಜರಾತ್ 73, ಕೇರಳದಲ್ಲಿ 65, ತೆಲಂಗಾಣ 62, ರಾಜಸ್ಥಾನದಲ್ಲಿ 46, ಕರ್ನಾಟಕದ 34, ತಮಿಳುನಾಡು 36 ಮತ್ತು ಹರ್ಯಾಣ 12, ಮಧ್ಯಪ್ರದೇಶ 9, ಒಡಿಶಾ 8, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 6, ಉತ್ತರಾಖಂಡದಲ್ಲಿ 4, ಚಂಡೀಗಢ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ 3 ಮತ್ತು ಉತ್ತರ ಪ್ರದೇಶದಲ್ಲಿ 2 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.










