ಪಠ್ಯ ಪುಸ್ತಕ ವಿವಾದ – ಸಿದ್ದಗಂಗಾ ಶ್ರೀಗಳು ಏನು ಹೇಳಿದ್ರು?

72
firstsuddi

ದಾವಣಗೆರೆ : ರಾಜ್ಯದಲ್ಲಿ ಉಂಟಾಗಿರುವ ಪಠ್ಯ ಪುಸ್ತಕ ವಿವಾದದ ವಿಚಾರವಾಗಿ ನಗರದಲ್ಲಿ ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಪ್ರತಿಕ್ರಿಯೆ ನೀಡಿದರು. ಇತ್ತೀಚಿಗೆ ಪಠ್ಯಪುಸ್ತಕ ವಿವಾದ ಬಹಳಷ್ಟು ತಿರುವು ಪಡೆದುಕೊಳ್ಳುತ್ತಿದೆ. ಯಾವುದೇ ಕಾರಣದಿಂದ ಇಂತಹ ವಾತಾವರಣ ಉಂಟಾಗಬಾರದು. ಮಕ್ಕಳಿಗೆ ಏನೇ ವಿಷಯ ಭೋದನೆ ಮಾಡಿದರೆ ನೈತಿಕ ಶಿಕ್ಷಣದ ಅಗತ್ಯ ಬೇಕಾಗಿದೆ. ಆದರೆ ಇವತ್ತಿನ ಪಠ್ಯದಲ್ಲಿ ನೈತಿಕ ಶಿಕ್ಷಣದ ಕೊರತೆ ಜಾಸ್ತಿ ಕಾಣುತ್ತಿದೆ. ಅದರ ಜೊತೆ ಮೂಲ ವಿಚಾರಗಳನ್ನು ತಿದ್ದದೇ ವಾಸ್ತವ ವಿಚಾರಗಳನ್ನು ಪಠ್ಯದಲ್ಲಿ ನೀಡಬೇಕು ಎಂದರು.

ಈಗಾಗಲೇ ಪಠ್ಯ ಪುಸ್ತಕ ರಚನಾ ಸಮಿತಿ, ತಜ್ಞರ ಸಮಿತಿ ಅದಕ್ಕೆ ಮಾರ್ಗದರ್ಶನ ನೀಡುತ್ತಿದೆ. ಈ ವಿವಾದ ಬಗೆಹರಿದು ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣವಾಗಬೇಕು ಜೊತೆಗೆ ನೈತಿಕ ಪ್ರಜ್ಞೆ ಜಾಗೃತಿಗೊಳಿಸುವ, ನೈತಿಕ ಮೌಲ್ಯಗಳನ್ನು ಪಠ್ಯ ಹೊಂದಿರಬೇಕು. ಬಸವಣ್ಣನವರ ವಚನಗಳನ್ನು ತಿದ್ದುವುದಕ್ಕೆ ಯಾರಿಂದಲು ಸಾಧ್ಯವಿಲ್ಲ. ಅದನ್ನು ಏನಾದರು ತಿದ್ದಿದರೆ ಅವರಿಗೆ ಅಪಚಾರ ಮಾಡಿದಂತಾಗುತ್ತದೆ. ಬಸವಣ್ಣನವರು ಏನು ಹೇಳಿದ್ದಾರೋ ವಾಸ್ತವ ವಿಚಾರ ಪ್ರಕಟವಾಗಬೇಕು. ಅಂದಿನಿಂದ ಇಂದಿನವರೆಗೂ ಸಾಮಾಜಿಕವಾಗಿ ಆರ್ಥಿಕವಾಗಿ ಬಹುದೊಡ್ಡ ಕೊಡುಗೆಯನ್ನು ಸಮಾಜಕ್ಕೆ ನೀಡುತ್ತಲೇ ಬಂದಿದ್ದಾರೆ. ಅವರ ವಚನಗಳೇ ನಮಗೆ ಆಧಾರ. ಅವುಗಳನ್ನು ತಿದ್ದದೇ ಹೇಗಿದೆಯೋ ಹಾಗೆ ಕೊಡಬೇಕು ಎಂದರು.