ಪತಿ ವಿರುದ್ಧವೇ ದೂರು ದಾಖಲಿಸಿದ ಹು-ಧಾ ಪಾಲಿಕೆ ಸದಸ್ಯೆ.

58
firstsuddi

ಹುಬ್ಬಳ್ಳಿ : ನನ್ನ ಮೇಲೆ ದೌರ್ಜನ್ಯ ಎಸಗಿದಲ್ಲದೇ, ಕುತ್ತಿಗೆ ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆ ಎಂದು ಪತಿ ವಿರುದ್ಧ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯೆ ಶೃತಿ ಚಲವಾದಿ ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪರಸ್ತ್ರಿಯೊಂದಿಗೆ ನನ್ನ ಪತಿ ಸಂತೋಷ್ ಮೊಬೈಲ್ ನಲ್ಲಿ ಮಾತನಾಡುವ ಮತ್ತು ಮೆಸೇಜ್ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದ. ಈ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮಿಬ್ಬರ ಮಧ್ಯೆ ಹಲವಾರು ಬಾರಿ ವಾಗ್ವಾದ ಏರ್ಪಟ್ಟಿದೆ. ಈ ಜಗಳ ಅತೀರೇಕಕ್ಕೆ ತಲುಪಿದಾಗ ನಾನು ಗರ್ಭಿಣಿಯೆಂದು ಲೆಕ್ಕಿಸದೇ ಪತಿ ನನ್ನ ಹಲ್ಲೆ ನಡಸಿದ್ದಾರೆ. ನಿನಗೆ ವಿಚ್ಛೆದನ ನೀಡಿ ನಾನು ಮತ್ತೊಬ್ಬಳನ್ನು ಮದುವೆಯಾಗುತ್ತೇನೆ. ನೀನು ಮನೆ ಬಿಟ್ಟು ಹೋಗು ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಶ್ರುತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರು ಆಧರಿಸಿ ಸಂತೋಷ್ ಚಲವಾದಿಯನ್ನು ಬಂಧಿಸಿರುವ ಕೇಶ್ವಾಪುರ ಠಾಣೆ ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ವಿನಯ್ ಪಿಳ್ಳೆ ಮತ್ತು ಕುಮಾರ ಪಿಳ್ಳೆ ಕೊಲೆ ಪ್ರಕರಣದಲ್ಲಿ ಸಂತೋಷ್ ಚಲವಾದಿ ಬಂಧಿತನಾಗಿದ್ದ. ಇತ್ತೀಚೆಗಷ್ಟೇ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಗೆ ಬಂದಿದ್ದ.