ಹಾಸನ : ಪತ್ನಿಗೆ ಮೆಸೇಜ್ ಮಾಡಿದಕ್ಕೆ ಟೈಲರ್ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಚನ್ನರಾಯಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅ.13ರಂದು ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಜನಿವಾರ ಗ್ರಾಮದ ಬಳಿ ಟೈಲರ್ ಗಂಗಾಧರ್(39) ಹತ್ಯೆ ನಡೆದಿತ್ತು.
ತನ್ನ ಪತ್ನಿಗೆ ಮೆಸೇಜ್ ಮಾಡುತ್ತಿದ್ದ ಎಂಬ ಕಾರಣಕ್ಕೆ ರೊಚ್ಚಿಗೆದ್ದ ಮಹಿಳೆ ಪತಿ ಭರತ್ ಆತನ ನಾಲ್ವರು ಸ್ನೇಹಿತರೊಂದಿಗೆ ಸೇರಿಕೊಂಡು ಗಂಗಾಧರ್ ಶಾಪ್ ಬಳಿ ಬಂದು ಆತನನ್ನು ಎಳೆದೊಯ್ದು ಜನಿವಾರ ಗ್ರಾಮದ ಬಳಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದರು. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಗಂಗಾಧರ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದರು.
ಸದ್ಯ ಪ್ರಕರಣ ಸಂಬಂಧ ಭರತ್, ಅಭಿಷೇಕ್, ಕುಮಾರ್, ಚಿರಂಜೀವಿ ಮತ್ತು ಅಭಿಯನ್ನು ಬಂಧಿಸಲಾಗಿದೆ.










