ಕೋಲಾರ : ಜಿಲ್ಲೆಯಲ್ಲಿ ಮೆದುಳು ಜ್ವರ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಅಲರ್ಟ್ ಘೊಷಿಸಲಾಗಿದೆ.
ತಾಲೂಕಿನ ತೊಟ್ಲಿ ಗ್ರಾಮದಲ್ಲಿ ಮೆದುಳು ಜ್ವರ ಪತ್ತೆಯಾಗಿದೆ. ಇದು ಸಾಂಕ್ರಮಿಕ ರೋಗವಾಗಿರುವುದರಿಂದ ತಮಗೂ ರೋಗ ಹರಡಬಹುದು ಎಂಬ ಆತಂಕ ಗ್ರಾಮದ ಜನರಲ್ಲಿ ಹೆಚ್ಚಾಗಿದೆ.
ತೊಟ್ಲಿ ಗ್ರಾಮದ 3 ಕಿ.ಮೀ. ವ್ಯಾಪ್ತಿಯಲ್ಲಿ ಹಂದಿ ಸಾಕಣೆ ಮಾಡದಂತೆ ನಿಷೇಧ ಹೇರಲಾಗಿದೆ. ಅಲ್ಲದೆ, ಗ್ರಾಮ ಪಂಚಾಯತಿಯಿಂದ ಶುಚಿತ್ವ ಕಾಪಾಡುವಂತೆ ಆರೋಗ್ಯ ಇಲಾಖೆಯಿಂದ ಪತ್ರ ಬರೆಯಲಾಗಿದೆ. 1ರಿಂದ 15 ವರ್ಷದ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ.
ಮೆದುಳು ಜ್ವರದ ಲಕ್ಷಣಗಳು:
ಜ್ಚರ, ತಲೆನೋವು, ಬೆಳಕಿಗೆ ಕಣ್ಣು ತೆರೆಯಲು ಸಾಧ್ಯವಾಗದಿರುವುದು, ಕುತ್ತಿಗೆ ಬಿಗಿಯಾಗುವುದು, ನಡೆದಾಡಲು ತೊಂದರೆ, ಹಸಿವು ಇಲ್ಲದಿರುವುದು, ಮಾತನಾಡುವಾಗ ತೊದಲುವುದು, ಮೈಯಲ್ಲಿ ನಡುಕ










