ಹೈದರಾಬಾದ್ : ಇಂದು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ತೆಲಂಗಾಣದ ಧರ್ಮಪುರದಿಂದ ಯಾತ್ರೆ ಪುನಾರಂಭವಾಗಿದ್ದು, ರಾಹುಲ್ ಗಾಂಧಿ ಆದಿವಾಸಿ ಸಮುದಾಯದ ಸಾಂಪ್ರದಾಯಿಕ ಡ್ಯಾನ್ಸ್ ಮಾಡಿದ್ದಾರೆ.
ತೆಲಂಗಾಣದ ಭದ್ರಚಾಲಂನ ಬುಡಕಟ್ಟು ಮಹಿಳೆಯರೊಂದಿಗೆ ‘ಕೊಮ್ಮು ಕೊಯಾ’ ಎಂಬ ನೃತ್ಯಕ್ಕೆ ರಾಹುಲ್ ಗಾಂಧಿ ಹೆಜ್ಜೆ ಹಾಕಿದರು. ಇವರೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಮತ್ತಿತರ ಕಾಂಗ್ರೆಸ್ ಮುಖಂಡರು ಕೂಡಾ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.










