ಧಾರವಾಡ : ಪತ್ನಿಯನ್ನು ಕೊಂದು ಪತಿ ಕೂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೊರವಲಯದ ಗಣೇಶ ನಗರದಲ್ಲಿ ನಡೆದಿದೆ.
ಚಟ್ಟು ತನ್ನ ಪತ್ನಿ ಮನಿಷಾಳನ್ನು ಹತ್ಯೆಗೈದು ನೇಣಿಗೆ ಶರಣಾಗಿದ್ದಾನೆ. ಕಳೆದ ರಾತ್ರಿ ಕುಡಿದು ಪತ್ನಿಯ ಜೊತೆ ಜಗಳ ಮಾಡಿದ ಚಟ್ಟು, ಪತ್ನಿ ಮಲಗಿದ್ದಾಗ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡಿ, ಬಳಿಕ ತಾನು ಕೂಡ ನೇಣು ಹಾಕಿಕೊಂಡಿದ್ದಾನೆ.
ಹಲವು ದಿನಗಳ ಹಿಂದೆ ಗೋವಾಕ್ಕೆ ಕೆಲಸಕ್ಕೆಂದು ತೆರಳಿದ್ದ ದಂಪತಿ ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಇಬ್ಬರು ವಾಪಸ್ ಬಂದಿದ್ದರು. ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.










