ಬೆಂಗಳೂರು : ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆ ಇಂದು ರಾಜ್ಯ ಸರ್ಕಾರ ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿದೆ. ಅದರಂತೆ ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಮಾಡುವಂತೆ ತಿಳಿಸಿದೆ. ಈ ಹೊಸ ಮಾರ್ಗಸೂಚಿ ಮೇ 4ರವರೆಗೆ ಜಾರಿಯಲ್ಲಿರಲಿದೆ.
ಯಾವುದೆಲ್ಲಾ ತೆರೆದಿರುತ್ತದೆ?
• ದಿನಸಿ, ಹಣ್ಣು, ತರಕಾರಿ ಡೈರಿ, ಮಾಂಸ, ಔಷಧಿ, ಅಂಗಡಿಗೆ ಅನುಮತಿ
• ಹೊಟೇಲ್, ರೆಸ್ಟೋರೆಂಟ್ ಗಳಲ್ಲಿ ಪಾರ್ಸಲ್ಗಳಿಗೆ ಮಾತ್ರ ಅವಕಾಶ
• ಮದ್ಯ ಪಾರ್ಸಲ್ ತೆಗೆದುಕೊಂಡು ಹೋಗಲು ಅನುಮತಿ
• ಬ್ಯಾಂಕ್, ಎಟಿಎಂ ಇನ್ಶುರೆನ್ಸ್ ಕಂಪನಿಗಳಿಗೆ ತೆರೆಯಲು ಅವಕಾಶ
• ಪೇಪರ್, ಟಿವಿ,ಮೀಡಿಯಾ ಕಂಪನಿಗಳಿಗೆ ತೆರೆಯಲು ಅವಕಾಶವಿದೆ
• ಇ -ಕಾಮರ್ಸ್ ಸೇವೆಯ ಕಚೇರಿಗಳಿಗೆ ತರೆಯಬಹುದು
• ಖಾಸಗಿ ಸೆಕ್ಯೂರಿಟಿ ಏಜೆನ್ಸಿ, ಕಟಿಂಗ್ ಶಾಪ್, ಬ್ಯೂಟಿ ಪಾರ್ಲರ್ ತೆರೆಯಲು ಅವಕಾಶ
• ಕಟ್ಟಡ ನಿರ್ಮಾಣ ಸಾಮಾಗ್ರಿ ಮಾರಾಟ ಮಾಡುವ ಅಂಗಡಿಗೆ ಅವಕಾಶ
ಯಾವುದೆಲ್ಲಾ ಬಂದ್?
ಬಟ್ಟೆ ಅಂಗಡಿಗಳು, ಮೊಬೈಲ್ ಶಾಪ್, ಟಿವಿ, ಬ್ಯಾಂಗಲ್ಸ್ ಸ್ಟೋರ್, ಚಿನ್ನದ ಅಂಗಡಿ ಬುಕ್, ಎಲೆಕ್ಟ್ರಾನಿಕ್ ಶೋ ರೂಮ್, ಶಾಪ್, ಚಪ್ಪಲಿ ಅಂಗಡಿಗಳು, ಫ್ಯಾನ್ಸಿ ಸ್ಟೋರ್, ಸೇರಿ ಎಲ್ಲವನ್ನೂ ಬಂದ್ ಮಾಡಬೇಕಿದೆ.










