ಪಾಕಿಸ್ತಾನ ನಾಯಕ ಸರ್ಫರಾಜ್ ಅವರನ್ನು ಹಂದಿ ಎಂದು ಕಿಚಾಯಿಸಿದ ಅಭಿಮಾನಿ…

311
firstsuddi

ಲಂಡನ್ : ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ ಹೀನಾಯವಾಗಿ ಸೋಲು ಕಂಡಿದ್ದು, ಪಾಕಿಸ್ತಾನ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಯೊಬ್ಬರು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅವರನ್ನು ಹಂದಿ ಎಂದು ಹೇಳಿರುವ ವೀಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದ್ದು, ಸರ್ಫರಾಜ್ ಅವರು ತಮ್ಮ ಕುಟುಂಬದೊಂದಿಗೆ ಶಾಪಿಂಗ್‍ಗೆ ತೆರಳಿದ್ದ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ಸೆಲ್ಫಿ ತೆಗೆದುಕೊಳ್ಳುವಂತೆ ಸರ್ಫರಾಜ್ ಅವರ ಬಳಿ ಕೇಳಿದ್ದು, ಸೆಲ್ಫಿ ತೆಗಿಸಿಕೊಳ್ಳಲು ಮುಂದಾದ ಅಭಿಮಾನಿ ಸೆಲ್ಫಿ ವೀಡಿಯೋ ಮಾಡುತ್ತಿರುವುದನ್ನು ನೋಡಿ ಸರ್ಫರಾಜ್ ಅವರು ಹಿಂದಕ್ಕೆ ಸರಿದಿದ್ದು, ಈ ವೇಳೆ ಅಭಿಮಾನಿಯೊಬ್ಬರು ಏಕೆ ಹೀಗೆ ಹಂದಿಯ ಹಾಗೆ ದಪ್ಪಗಿದ್ದೀರ. ಡಯಟ್ ಮಾಡಿ ಎಂದು ಕಿಡಿಕಾರಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.