ಪಾರ್ಕ್‍ನಲ್ಲಿ ಆಟವಾಡುವ ವೇಳೆ ಹೊಂಡಕ್ಕೆ ಬಿದ್ದು ಬಾಲಕ ಸಾವು…

75
firstsuddi

ಬೆಂಗಳೂರು : ಪಾರ್ಕ್ ಹೊಂಡಕ್ಕೆ ಬಿದ್ದು ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಮಲ್ಲಸಂದ್ರ ವಾರ್ಡಿನ ಪಾರ್ಕ್ ನಲ್ಲಿ ನಡೆದಿದೆ.

ಪ್ರತಾಪ್(9) ಮೃತ ಬಾಲಕ. ನಿನ್ನೆ ಆಟವಾಡಲು ಹೋಗಿದ್ದ ಪ್ರತಾಪ್ ಬಿಬಿಎಂಪಿ ವತಿಯಿಂದ ನಿರ್ಮಾಣವಾಗಿದ್ದ ಕೆಂಪೇಗೌಡ ಉದ್ಯಾನವನದ ಪಾರ್ಕ್‍ನಲ್ಲಿರುವ ಹೊಂಡಕ್ಕೆ ಬಿದ್ದಿದ್ದಾನೆ. ತಮ್ಮನನ್ನು ರಕ್ಷಣೆ ಮಾಡಲು ಅಣ್ಣ ರವಿತೇಜಾ ಮುಂದಾಗಿದ್ದು, ಆತ ಕೂಡ ಹೊಂಡಕ್ಕೆ ಬಿದ್ದಿದ್ದಾನೆ. ಇದನ್ನು ಗಮನಸಿದ ಸ್ಥಳೀಯರು ಕೂಡಲೇ ರವಿತೇಜಾನನ್ನ ಕಾಪಾಡಿದ್ದಾರೆ. ಆದರೆ ತಮ್ಮ ಪ್ರತಾಪ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸದ್ಯ ಬಾಲಕನ ಮೃತದೇಹ ಸಪ್ತಗಿರಿ ಆಸ್ಪತ್ರೆಯಲ್ಲಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಶಾಸಕರಾದ ಶ್ರೀ ಆರ್.ಮಂಜುನಾಥ್ ಅವರು ಮಗುವಿನ ಕುಟುಂಬಕ್ಕೆ 50 ಸಾವಿರ ರೂಗಳ ಧನಸಹಾಯ ಮಾಡಿದರು. ಘಟನೆ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.