ಪೌರತ್ವ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಸಹಿ, ದೇಶಾದ್ಯಂತ ಕಾಯ್ದೆಯಾಗಿ ಜಾರಿ…

154
firstsuddi

ನವದೆಹಲಿ : ಈಶಾನ್ಯ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಪೌರತ್ವ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಹಿ ಹಾಕಿದ್ದು, ಮಧ್ಯರಾತ್ರಿಯಿಂದಲೇ ಈ ಮಸೂದೆ ಇಡೀ ದೇಶಾದ್ಯಂತ ಜಾರಿ ಆಗಿದೆ. ಈ ಪೌರತ್ವ ತಿದ್ದುಪಡಿ ಪ್ರಕಾರ ಡಿ.31,2014ರೊಳಗೆ ನೆರೆಯ ದೇಶಗಳಾದ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶಗಳಿಂದ ವಲಸೆ ಬಂದಿರುವ ಹಿಂದೂ, ಬೌದ್ಧ, ಪಾರ್ಸಿ, ಜೈನ ಮತ್ತು ಸಿಖ್ ಮತಸ್ಥರಿಗೆ ಪೌರತ್ವವನ್ನು ನೀಡಲಾಗುತ್ತದೆ. ಪೌರತ್ವ ತಿದ್ದುಪಡಿ ಮಸೂದೆ ಕಳೆದ ಸೋಮವಾರ ಲೋಕಸಭೆಯಲ್ಲಿ ಹಾಗೂ ಬುಧವಾರ ರಾಜ್ಯಸಭೆಯಲ್ಲಿ ಅಂಗೀಕಾರವಾಗಿತ್ತು.