ಮಂಗಳೂರು : ನಗರದ ಕೂಳೂರು ಸಮೀಪದ ಪಂಜಿಮೊಗರು ಉರುಂದಾಡಿ ಗುಡ್ಡೆಯ ಪ್ರಾರ್ಥನಾ ಮಂದಿರವನ್ನು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಲತೀಶ್ (25) ಮತ್ತು ಧನಂಜಯ (36) ಎಂದು ಗುರುತಿಸಲಾಗಿದೆ.
ಫೆ.5ರಂದು ಸಂತ ಅಂತೋನಿ ಹೋಲಿ ಕ್ರಾಸ್ ಪ್ರಾರ್ಥನಾ ಮಂದಿರವನ್ನು ಜೆಸಿಬಿಯ ಮೂಲಕ ಕೆಡವಲಾಗಿತ್ತು. ಈ ಸಂಬಂಧ ಸಂತ ಅಂತೋನಿ ಹೋಲಿ ಕ್ರಾಸ್ ಕಟ್ಟಡ ಸಮಿತಿಯ ಆಡಳಿತ ಮಂಡಳಿ ಸದಸ್ಯರು ದೂರು ದಾಖಲಿಸಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದರು. ಅದರಂತೆ ಇದೀಗ ಕಾವೂರು ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.










