ಪ್ರಿಯಕರನ ಗುಪ್ತಾಂಗವನ್ನು ಕತ್ತರಿಸಿದ ಪ್ರೇಯಸಿ, 13 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

284
firstsuddi

ಬ್ಯೂನಸ್‍ಐರಿಸ್ : ಪ್ರಿಯಕರ ತಮ್ಮಿಬ್ಬರ ಸೆಕ್ಸ್ ವೀಡಿಯೋವನ್ನು ತನ್ನ ಸ್ನೇಹಿತರಿಗೆ ತೋರಿಸಿದ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಪ್ರೇಯಸಿ ಪ್ರಿಯಕರನ ಗುಪ್ತಾಂಗವನ್ನೇ ಕತ್ತರಿಸಿದ್ದು, ಈಗಾ ಪ್ರೇಯಸಿಗೆ ನ್ಯಾಯಾಲಯ 13 ವರ್ಷ ಜೈಲು ಶಿಕ್ಷೆ ವಿಧಿಸಿದೆ. 2017 ರ ನವೆಂಬರ್ 25ರಂದು ನಡೆದ ಕೃತ್ಯ ಇದಾಗಿದ್ದು, ಆರ್ಕಿಟೆಕ್ಟ್ ಆಗಿರುವ ಬ್ರೆಂಡಾ ಎಂಬ ಯುವತಿ ಸೆರಿಗೋ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವೇಳೆ ಸೆರಿಗೋ ಪ್ರಿಯತಮೆಗೆ ತಿಳಿಯದಂತೆ ಲೈಂಗಿಕ ಸಂಪರ್ಕ ಬೆಳೆಸಿರುವ ವೀಡಿಯೋವನ್ನು ರೆಕಾರ್ಡ್ ಮಾಡಿದ್ದು, ಅಲ್ಲದೇ ಆ ವೀಡಿಯೋವನ್ನು ತನ್ನ ಸ್ನೇಹಿತರಿಗೂ ತೋರಿಸಿದ್ದನು. ಈ ವಿಷಯ ತಿಳಿದ ಬ್ರೆಂಡಾ ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ಕಣ್ಣಿಗೆ ಬಟ್ಟೆಯನ್ನು ಕಟ್ಟಿ ಪ್ರಿಯಕರನ ಗುಪ್ತಾಂಗವನ್ನು ಕತ್ತರಿಸಿದ್ದಾಳೆ. ಈ ಬಗ್ಗೆ ಬ್ರೆಂಡಾಳನ್ನು ವಿಚಾರಣೆ ನಡೆಸಿದ್ದು, ನಾನು ಆತನನ್ನು ಕೊಲ್ಲುವ ದೃಷ್ಟಿಯಿಂದ ಹೀಗೆ ಮಾಡಲಿಲ್ಲ. ನನಗೆ ಅವನ ಮೇಲೆ ಪ್ರೀತಿ ಇದೆ. ಆದರೆ ಅವನು ನಮ್ಮಿಬ್ಬರ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿರುವುದಲ್ಲದೇ ಅದನ್ನು ತನ್ನ ಸ್ನೇಹಿತರಿಗೆ ತೋರಿಸಿದ್ದಾನೆ. ಇದರಿಂದ ನನ್ನ ಜೀವನ ಹಾಳಾಯಿತು, ನನ್ನ ಕೆಲಸಕ್ಕೆ ಕುತ್ತು ತಂದಿತು ಎಂಬ ಕಾರಣಕ್ಕೆ ಸಿಟ್ಟಿನಿಂದ ಈ ಕೃತ್ಯ ಎಸಗಿದ್ದೇನೆ. ಅಲ್ಲದೇ ನಾನೇ ಅವನನ್ನು ಆಸ್ಪತ್ರೆಗೆ ದಾಖಲಿಸಿದ್ದೇನೆ  ಎಂದು ನ್ಯಾಯಾಲದಲ್ಲಿ ತಪ್ಪೊಪ್ಪಿಕೊಂಡಿದ್ದಾಳೆ. ಈ ಕುರಿತು ವಾದ ಪ್ರತಿವಾದವನ್ನು ಆಲಿಸಿದ ಕೋರ್ಟ್ ಬ್ರೆಂಡಾಗೆ 13 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.