ಫಿಲಿಫೈನ್ಸ್ ನಿಂದ ಬಂದ ಅಭಿಮಾನಿಯನ್ನು ಭೇಟಿಯಾದ ರಾಕಿಂಗ್ ಸ್ಟಾರ್ ಯಶ್…

258
firstsuddi

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಬಿಡುಗಡೆಯಾದ ಬಳಿಕ ಯಶ್ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದು, ಇದೀಗಾ ಫಿಲಿಫೈನ್ಸ್ ನಿಂದ ಬಂದ ಅಭಿಮಾನಿಯನ್ನು ಭೇಟಿಯಾಗಿದ್ದಾರೆ. ಪೇಟೆ ಅಶೋಕ್ ಜೋರ್ನಲ್ ಎಂಬ ಅಭಿಮಾನಿ  ಯಶ್ ಅವರನ್ನು ಭೇಟಿಯಾಗಲು ಫಿಲಿಫೈನ್ಸ್ ನಿಂದ ಬೆಂಗಳೂರಿಗೆ ಬಂದಿದ್ದು, ನಾನು ಯಶ್ ಅಭಿಮಾನಿ. ನಾನು ಅವರನ್ನು ನೋಡಬೇಕು. ನನಗೆ ಸಹಾಯ ಮಾಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು. ಅಲ್ಲದೇ ಯಶ್ ಅವರನ್ನು ಬೇಟಿ ಮಾಡಿಸಿ ಎಂದು ಮಾಧ್ಯಮ ಮತ್ತು ಯಶ್ ಅವರ ಇತರೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಅದರಂತೆ ಪೇಟೆ ಅಶೋಕ್ ಅವರು ಯಶ್ ಅವರನ್ನು ಭೇಟಿಯಾಗಿದ್ದು, ಯಶ್‍ಗಾಗಿ ತಂದಿದ್ದ ಸಿಹಿಯನ್ನು ತಿನ್ನಿಸಿ ಸಂತಸಪಟ್ಟಿದ್ದಾರೆ. ಅಶೋಕ್ ಪೇಟೆ ಅವರು ಯಶ್ ಅಭಿನಯದ ಕೆಜಿಎಫ್ ಚಿತ್ರದಲ್ಲಿ ಯಶ್ ಅಭಿನಯ ಹಾಗೂ ಯಶೋಮಾರ್ಗದ ಮೂಲಕ ಜನಸೇವೆ ಮಾಡುತ್ತಿರುವುದನ್ನು ಮೆಚ್ಚಿಕೊಂಡಿದ್ದರು. ಅಲ್ಲದೆ ಯಶ್ ಅವರಿಗಾಗಿ ಕನ್ನಡವನ್ನು ಕಲಿಯುತ್ತಿದ್ದಾರೆ.