ಬಂಟ್ವಾಳ : ಆಶಾ ಕಾರ್ಯಕರ್ತೆ ಮೇಲೆ ಪೊರಕೆಯಿಂದ ಹಲ್ಲೆಗೆ ಯತ್ನ…

224
firstsuddi

ಬಂಟ್ವಾಳ: ಆಶಾ ಕಾರ್ಯಕರ್ತೆ ಮೇಲೆ ಪೊರಕೆಯಿಂದ ಹಲ್ಲೆಗೆ ಯತ್ನಿಸಿರುವ ಘಟನೆ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಕ್ಕಿಪಾಡಿಯಲ್ಲಿ ನಡೆದಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮನೆಯ ಮುಂದೆ ಜನ ಸೇರಿದ್ದನ್ನು ಪ್ರಶ್ನಿಸಿದ್ದಕ್ಕೆ ಆಶಾ ಕಾರ್ಯಕರ್ತೆ ಪುಷ್ಪಲತಾ ಅವರ ಮೇಲೆ ಕುಕ್ಕಿಪಾಡಿಯ ಶ್ರೀಮತಿ ಎಂಬ ಮಹಿಳೆಯಿಂದ ಹಲ್ಲೆ ಯತ್ನ ನಡೆದಿದೆ ಎಂದು ಆರೋಪಿಸಲಾಗಿದೆ.
ಶ್ರೀಮತಿಯ ಪತಿ ವಿಶ್ವನಾಥ ಎಂಬುವವರಿಂದ ಮನೆಯಲ್ಲಿ ಮಂತ್ರವಾದಿ ಕಾರ್ಯನಡೆಯುತ್ತಿದ್ದು ಹೀಗಾಗಿ ಇವರ ಮನೆಗೆ ಬರುತ್ತಿದ್ದ ಹತ್ತಾರು ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮನೆಯ ಮುಂದೆ ಸೇರಿದ್ದರು ಎನ್ನಲಾಗಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಪೊರಕೆಯಿಂದ ಪುಷ್ಪಲತಾ ಅವರ ಮೇಲೆ ಹಲ್ಲೆಗೆ ಯತ್ನಿಸಲಾಗಿದ್ದು, ಕಾರ್ಯಕರ್ತೆ ಬಳಿಕ ಕುಕ್ಕಿಪಾಡಿ ಪಂಚಾಯತ್ ಸದಸ್ಯರಾದ ಯೋಗೀಶ್ ಆಚಾರ್ಯ ಎಂಬವರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪಂಚಾಯತ್ ಸದಸ್ಯನ ಮೇಲೂ ಹಲ್ಲೆ ಯತ್ನನಡೆಸಿದ್ದಲ್ಲದೆ ಆಶಾ ಕಾರ್ಯಕರ್ತೆಗೂ ಅವಾಚ್ಯವಾಗಿ ನಿಂದಿಸಿ ಹಲ್ಲೆಗೆ ಶ್ರೀಮತಿ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.