ಬಾಯ್‍ಫ್ರೆಂಡ್ ಭೇಟಿಗಾಗಿ ದುಬೈನಿಂದ ಬೆಂಗಳೂರಿಗೆ ಬಂದಿದ್ದ ಗಗನಸಖಿ ಆತ್ಮಹತ್ಯೆ…

52
firstsuddi

ಬೆಂಗಳೂರು : ತನ್ನ ಬಾಯ್‍ಫ್ರೆಂಡ್ ನನ್ನು ಭೇಟಿ ಮಾಡಲು ದುಬೈನಿಂದ ಬಂದಿದ್ದ ಗಗನಸಖಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.

28 ವರ್ಷದ ಅರ್ಚನಾ ಧೀಮನ್ ಸಾವನ್ನಪ್ಪಿದ ಯುವತಿ. ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಕೋರಮಂಗಲದ 8ನೇ ಬ್ಲಾಕ್ ನಲ್ಲಿರುವ ರೇಣುಕಾ ರೆಸಿಡೆನ್ಸಿಯ 4ನೇ ಮಹಡಿಯಿಂದ ಬಿದ್ದು ಅರ್ಚನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕಳೆದ ನಾಲ್ಕು ದಿನಗಳ ಹಿಂದಷ್ಟೇ ಈಕೆ ಬೆಂಗಳೂರಿಗೆ ಬಂದಿದ್ದಳು. ನಿನ್ನೆ ರಾತ್ರಿ ಇಬ್ಬರ ಮಧ್ಯೆ ಗಲಾಟೆ ನಡೆದಿದೆ ಎಂಬ ಮಾಹಿತಿ ಸಿಕ್ಕಿದ್ದು, ಯುವಕನೇ ಮೇಲಿಂದ ತಳ್ಳಿರೋ ಸಾಧ್ಯತೆ ಇದೆ ಅಂತ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ಬಾಯ್ ಪ್ರೇಂಡ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಪ್ರತಿಷ್ಠಿತ ಏರ್ ಲೈನ್ಸ್ ನಲ್ಲಿ ಗಗನಸಖಿಯಾಗಿರುವ ಅರ್ಚನಾ ಧೀಮನ್ ಆದೇಶ್ ನನ್ನು ಭೇಟಿಯಾಗಲು ದುಬೈನಿಂದ ಬೆಂಗಳೂರಿಗೆ ಬಂದಿದ್ದರು. ಕಳೆದ ಕೆಲ ವರ್ಷಗಳಿಂದ ಅರ್ಚನಾ ಮತ್ತು ಆದೇಶ್ ಪ್ರೀತಿಸ್ತಿದ್ದರು. ಕೇರಳ ಮೂಲದ ಆದೇಶ್, ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು ಎಂಬ ಮಾಹಿತಿ ಲಭ್ಯವಾಗಿದೆ.