ಮುಂಬೈ: ಬಾಲಿವುಡ್‌ನ ಹಿರಿಯ ನಟ ರಣಧೀರ್ ಕಪೂರ್(74) ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಣಧೀರ್ ಕಪೂರ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.ಭಯ ಪಡುವ ಅವಶ್ಯಕತೆ ಇಲ್ಲ. ಕೋವಿಡ್-19ಗಾಗಿ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.
ರಣಧೀರ್ ಕಪೂರು ಅವರು ಈ ಹಿಂದೆ ಎರಡೂ ಡೋಸ್‌ಗಳ ಕೋವಿಡ್ ಲಸಿಕೆಯನ್ನು ರಣಧೀರ್ ಕಪೂರ್ ಪಡೆದಿದ್ದರು. ಲಸಿಕೆ ಪಡೆದಿದ್ದರೂ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ರಣಧೀರ್ ಕಪೂರ್ ಜೊತೆಗೆ ಅವರ ಐವರು ಸಿಬ್ಬಂದಿಗಳಿಗೂ ಕೊರೊನಾ ವೈರಸ್ ಸೋಂಕು ತಗುಲಿದೆ.










